

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಸಂಸ್ಥಾಪಕ ಟಿ.ವಿ.ನಾರಾಯಣಶಾಸಿö ಅವರ 99ನೇ ಜನ್ಮದಿನಾಚರಣೆ ಮತ್ತು ನಾ ಕಂಡAತೆ ನನ್ನ ಗುರು ಟಿವಿಎನ್ ಪುಸ್ತಕ ಬಿಡುಗಡೆ ಸಮಾರಂಭ ಡಿ.30ರಂದು ಸಂಜೆ 6ಕ್ಕೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ತಿಳಿಸಿದರು. ಟಿವಿಎನ್ ಅವರು ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಪಿತಾಮಹ ಎಂದು ಕರೆಸಿಕೊಂಡಿದ್ದಾರೆ. -Ëಂಡ್ರಿ ಕೈಗಾರಿಕೆಗಳು, ಆಟೋ ಮೊಬೈಲ್ ಕ್ಷೇತ್ರದಲ್ಲಿ ಅವರ ಸೇವೆ ಅಪಾರವಾಗಿತ್ತು. ಕೈಗಾರಿಕೆಗಳ ಅಭಿವೃದ್ಧಿ, ಉದ್ದಿಮೆದಾರರು ಮತ್ತು ಕಾರ್ಮಿಕರ ಭವಿಷ್ಯಕ್ಕಾಗಿ ಸೇವೆ ಸಲ್ಲಿಸಿದ ಗೌರವಾರ್ಥವಾಗಿ ಟಿವಿಎನ್ ಅವರ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲಾಽಕಾರಿ ಡಾ. ಆರ್.ಸೆಲ್ವಮಣಿ ಕಾರ್ಯಕ್ರಮ ಉದ್ಘಾಟಿಸುವರು. ಎಂಎಲ್‌ಸಿ ಎಸ್.ರುದ್ರೇಗೌಡ ಪುಸ್ತಕ ಬಿಡುಗಡೆಗೊಳಿಸುವರು. ಸಂಘದ ಗೌರವಾಧ್ಯಕ್ಷ ಕೆ.ಎಸ್.ಅನಂತರಾಮ್, ಸಾಗರ ರಸ್ತೆಯ ಎಸ್‌ಜಿಕೆ ಇಂಡಸ್ಟಿçÃಸ್‌ನ ಬಿ.ಸಿ.ನಂಜುAಡಶೆಟ್ಟಿ, ಬೆಂಗಳೂರಿನ ಟೀಂ ಇಂಡಿಯಾ ಎಂಟರ್ ಪ್ರೆನ್ಯೂರ್ ಅಧ್ಯಕ್ಷ ಆನಂದ್ ನಾಟೇಕರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಆರ್.ಗಣೇಶ್ ಮುಖ್ಯ ಅತಿಥಿಯಾಗಿರುವರು ಎಂದರು. ಸಂಘದ ಕಾರ್ಯದರ್ಶಿ ವಿಶ್ವೇಶ್ವರಯ್ಯ, ಉಪಾಧ್ಯಕ್ಷ ಹರ್ಷ ಕಾಮತ್, ಜಂಟಿ ಕಾರ್ಯದರ್ಶಿ ಎನ್.ಸಿ.ಪ್ರಕಾಶ್, ನಿರ್ದೇಶಕರಾದ ಎ.ಎಂ.ಸುರೇಶ್, ರವಿ ಹಮ್ಮಿಗೆ ಇದ್ದರು.