ಅಭಿಯಂತರರ ಸಂಸ್ಥೆಯ 30ನೇ ವಾರ್ಷಿಕೋತ್ಸವ ಹಿನ್ನೆಲೆಮೂರು ದಿನ ನಾಟಕ ಪ್ರದರ್ಶನ

Drama-games
Published on

ಮೈಸೂರು: ಅಭಿಯಂತರರ ಸಂಸ್ಥೆಯ 30ನೇ ವಾರ್ಷಿಕೋತ್ಸವ ಅಂಗವಾಗಿ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಡಿ.8ರಿಂದ 10ರವರೆಗೆ ‘ರಂಗ ಸಂಭ್ರಮ ಉತ್ಸವ’ ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಿ.8ರಂದು ಸಂಜೆ 6.30ಕ್ಕೆ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ‘ಅಭಿಯಂತರರು’ ಶೀರ್ಷಿಕೆಯಡಿ ರಾಜಶೇಖರ ಕದಂಬ ಅವರ ಸಂಪಾದಕತ್ವದಲ್ಲಿ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಬಿಡುಗಡೆ ಮಾಡಲಿದ್ದಾರೆ. ಹಿರಿಯ ರಂಗಕರ್ಮಿಗಳಾದ ರಾಜಶೇಖರ ಕದಂಬ, ರಾಜೇಂದ್ರ ಕಾರಂತ ಭಾಗವಹಿಸಲಿದ್ದಾರೆ.

8ರಂದು ಸಂಜೆ 7 ಗಂಟೆಗೆ ‘ಸೂಳೇ ಸನ್ಯಾಸಿ’ ನಾಟಕ ಪ್ರದರ್ಶನವಿರಲಿದೆ. ಕೆ.ವಿ.ಸುಬ್ಬಣ್ಣ ರಚಿಸಿರುವ ಈ ನಾಟಕವನ್ನು ಮಂಜುನಾಥ್ ಬಡಿಗೇರ್ ನಿರ್ದೇಶಿಸಿದ್ದಾರೆ. 9 ರಂದು ಸಂಜೆ 7 ಗಂಟೆಗೆ ‘ಮಲ್ಲಿಗೆ ತೋಟದಲ್ಲಿ ಮರ್ಡರ್’ ನಾಟಕ ಪ್ರದರ್ಶನ ನಡೆಯಲಿದ್ದು, ರಾಜೇಂದ್ರ ಕಾರಂತ್ ನಿರ್ದೇಶಿಸಿದ್ದಾರೆ. 10 ರಂದು ಸಂಜೆ 7 ಗಂಟೆಗೆ ಪೂರ್ಣಚಂದ್ರ ತೇಜಸ್ವಿ ಅವರ ‘ಚಿದಂಬರ ರಹಸ್ಯ’ ನಾಟಕ ಪ್ರದರ್ಶನ ನಡೆಯಲಿದೆ. ಸಿ.ಬಸವಲಿಂಗಯ್ಯ ಅವರ ರಂಗರೂಪದ ಈ ನಾಟಕವನ್ನು ಎಚ್.ಎಸ್.ಸುರೇಶ್ ಬಾಬು ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net