309 ಸುಸ್ತಿದಾರರ ವಿರುದ್ಧ ಕೇಸ್ ದಾಖಲು

RAJKUMAR PATIL
Published on

ಕಲಬುರಗಿ: ದಿವಾಳಿ ಅಂಚಿನಲ್ಲಿದ್ದ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಮಧ್ಯವರ್ತಿ ಬ್ಯಾಂಕನ್ನು ಮತ್ತೇ ಲಾಭದಾಯಕ ಸಂಸ್ಥೆಯನ್ನಾಗಿ ಮಾಡಲು ನಿರ್ಧರಿಸಿರುವ ಹೊಸ ಆಡಳಿತ ಮಂಡಳಿ ಇದಕ್ಕಾಗಿ ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.
ಬ್ಯಾಂಕ್ ನಷ್ಟ ಅನುಭವಿಸಲು ಮಧ್ಯಮಾವಧಿ ಸಾಲ ವಸೂಲಿ ಆಗದಿರುವುದೇ ಕಾರಣವಾಗಿದೆ. ಸಾಲ ಪಡೆದುಕೊಂಡ 711 ಜನ ಸುಸ್ತಿದಾರರಾಗಿದ್ದು, ಇವರಿಗೆ ಸಾಲ ಮರುಪಾವತಿ ಮಾಡುವಂತೆ ನೊಟೀಸ್ ನೀಡಲಾಗಿದೆ. 309 ಸಾಲಗಾರರ ವಿರುದ್ಧ ಕೇಸ್ ಹಾಕಲಾಗಿದೆ ಎಂದು ಹೇಳುವ ಮೂಲಕ ಶಾಸಕರೂ ಆಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಅವರು ತಾವು ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕೇಸಿಗೂ ಜಗ್ಗದೆ ಹೋದರೆ ಅವರ ಭಾವಚಿತ್ರ ಸಮೇತ ಪತ್ರಿಕೆಗಳಲ್ಲಿ ಪ್ರಕಟಿಸಿ, ನೋಟೀಸ್ ಬೋಡರ್್ನಲ್ಲಿ ಹಾಕಲಾಗುವುದು. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜ ಮಾಡಿ ಸಾಲ ಭರಿಸಿಕೊಳ್ಳಲಾಗುವುದು ಎಂದರು. ಬ್ಯಾಂಕ್ ಸುಧಾರಣೆ ಅಂಗವಾಗಿ ಆಲಸ್ಯ ತೋರುತ್ತಿರುವ 103 ಸಿಬ್ಬಂದಿಯನ್ನು ವಗರ್ಾಯಿಸಲಾಗಿದೆ ಎಂದರು.
ಬ್ಯಾಂಕಿನಿಂದ ಈ ವರ್ಷ ರೈತರಿಗೆ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ 500 ಕೋ.ರೂ. ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಯುಗಾದಿ ಹಬ್ಬದಿಂದ (ಏ.15ರಿಂದ) ಹೊಸ ಸಾಲ ವಿತರಣೆ ಆರಂಭವಾಗಲಿದೆ ಎಂದು ಹೇಳಿದರು.
ಬ್ಯಾಂಕಿನಿಂದ 130 ಕೋ.ರೂ ಬೆಳೆ ಸಾಲ ವಸೂಲಿ ಮಾಡಲಾಗಿದೆ. ಸಿಎಂ ಯಡಿಯೂರಪ್ಪನವರು 10 ಕೋಟಿ ಷೇರು ಬಂಡವಾಳ ಬಿಡುಗಡೆ ಮಾಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ 60 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಲಾಗಿದೆ. 325 ಕೋಟಿ ಷೇರು ಬಂಡವಾಳ ಇದೆ. ಅಪೆಕ್ಸ್ ಬ್ಯಾಂಕಿನ ಸಾಲವನ್ನು ಪಾವತಿಸಿದ್ದರಿಂದ ಬ್ಯಾಂಕ್ ಪುನರುಜ್ಜೀವನಕ್ಕೆ ಕಡಿಮೆ ಬಡ್ಡಿಗೆ 200 ಕೋ.ರೂ. ಸಾಲ ನೀಡಲು ಅಪೆಕ್ಸ್ ಬ್ಯಾಂಕ್ ಮುಂದಾಗಿದೆ. ಜತೆಗೆ 300 ಕೋಟಿ ಹೆಚ್ಚುವರಿ ಸಾಲ ಕೋರಲಾಗಿದೆ. ಈಗಾಗಲೇ ನೆರವು ನೀಡಲು ನಬಾರ್ಡ ತಾತ್ವಿಕ ಒಪ್ಪಿಕೊಂಡಿದೆ ಹೀಗೆ ಹಲವು ಮೂಲಗಳಿಂದ ಹಣವನ್ನು ತರುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.
ರೈತರಿಗೆ ಬಡ್ಡಿ ರಹಿತವಾಗಿ 12 ತಿಂಗಳ ಅವಧಿಗೆ 3 ಲಕ್ಷ ರೂ.ವರೆಗೆ ಬೆಳೆ ಸಾಲ ನೀಡಲಾಗುವುದು. ಮಹಿಳಾ ಸ್ವಸಹಾಯ ಸಂಘಗಳಿಗೆ ಹೈನುಗಾರಿಕೆ, ಸ್ವ ಉದ್ಯೋಗ, ಕೋಳಿ, ಕುರಿ ಸಾಕಾಣಿಕೆಗೆ 5 ಲಕ್ಷ ರೂ. ಸಾಲ ನೀಡಲಾಗುವುದು. ಹೈನುಗಾರಿಕೆ, ತೋಟಗಾರಿಕೆಗೆ ಶೇ.3 ಬಡ್ಡಿ ದರದಲ್ಲಿ 10 ಲಕ್ಷ ವರೆಗೆ ಮಧ್ಯಮಾವಧಿ ಬೆಳೆ ಸಾಲ ನೀಡಲಾಗುವುದು. ಬ್ಯಾಂಕ್ನಿಂದ ಗರಿಷ್ಠ 40 ಲಕ್ಷದವರೆಗೆ ವಾಣಿಜ್ಯ ಸಾಲವನ್ನು 10 ಸಾವಿರ ವರ್ತಕರಿಗೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಸಕರ್ಾರಿ ಸಂಸ್ಥೆಗಳು ಪ್ರಮುಖ ವರ್ತಕರ ವ್ಯವಹಾರವನ್ನು ಡಿಸಿಸಿ ಬ್ಯಾಂಕ್ ಜತೆಗೆ ಮಾಡುವಂತೆ ಕೋರಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ್, ವ್ಯವಸ್ಥಾಪಕ ನಿದರ್ೇಶಕ ಚಿದಾನಂದ ನಿಂಬಾಳ, ನಿದರ್ೇಶಕರಾದ ಶರಣಬಸಪ್ಪ ಪಾಟೀಲ್ ಅಷ್ಟಗಿ, ಗೌತಮ ಪಾಟೀಲ್, ಸಿದ್ದರಾಮ ರೆಡ್ಡಿ ಕೌಳೂರ, ಅಶೋಕ ಸಾವಳೇಶ್ವರ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net