

ಚಿಕ್ಕಮಗಳೂರು: ಸೆ. ೧೪ರಂದು ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ೬,೨೭೧ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ ೩,೦೩೬ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ತಿಳಿಸಿದ್ದಾರೆ.
ರಾಜಿಯಾಗಬಹುದಾದ ೧೧೨ ಕ್ರಿಮಿನಲ್ ಪ್ರಕರಣಗಳಲ್ಲಿ ೨೪ ಪ್ರಕರಣಗಳು, ೫೯೨ ಚೆಕ್ ಅಮಾನ್ಯ ಪ್ರಕರಣಗಳಲ್ಲಿ ೧೧೦, ೮೧ ಹಣ ವಸೂಲಾತಿ ಪ್ರಕರಣಗಳಲ್ಲಿ ೫, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ೨೦೯ ಪ್ರಕರಣಗಳಲ್ಲಿ ೧೦, ಕಾರ್ಮಿಕ ವಿವಾದ ೩೨ ಪ್ರಕರಣಗಳಲ್ಲಿ ೧, ವಿದ್ಯುತ್ ಶುಲ್ಕ ೬ ಪ್ರಕರಣಗಳಲ್ಲಿ ೬, ಗಣಿ ಮತ್ತು ಖನಿಜಗಳ ೨೩ ಪ್ರಕರಣಗಳಲ್ಲಿ ೧೦, ವೈವಾಹಿಕ ಅಥವಾ ಕುಟುಂಬ ನ್ಯಾಯಾಲಯದ ೧೦೯ ಪ್ರಕರಣಗಳಲ್ಲಿ ೮, ಭೂಸ್ವಾಧೀನ ಪ್ರಕರಣದಲ್ಲಿ ೧, ಸಿವಿಲ್ ೧೨೦೫ (ಬಾಡಿಗೆ, ಅನುಭೋಗದ ಹಕ್ಕುಗಳು ನಿರ್ಬಂಧಕಾಜ್ಞೆ ಮೊಕದ್ದಮೆಗಳು) ಪ್ರಕರಣಗಳಲ್ಲಿ ೧೩೭ ಇತರೆ ಕ್ರಿಮಿನಲ್‌ನ ೩೮೨೯ (ರಾಜಿಯಾಗಬಲ್ಲ ಅಪರಾಧ ಪ್ರಕರಣಗಳು, ವೈವಾಹಿಕ ಪ್ರಕರಣಗಳು) ಪ್ರಕರಣಗಳಲ್ಲಿ ೨೭೦೪ ಪ್ರಕರಣಗಳು ಸೇರಿದಂತೆ ಒಟ್ಟು ೩,೦೩೬ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.