

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್‌ಗೆ ಕೆಎಂಸಿಆರ್‌ಐ ನಾಮಕರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಗೆ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ರಕ್ತದಾನ ಶಿಬಿರವೂ ಒಂದು.
ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಒಟ್ಟು 301 ಜನರು ಬುಧವಾರ ರಕ್ತದಾನ ಮಾಡಿದರು. ಪ್ರಮುಖವಾಗಿ ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಅವರು ರಕ್ತದಾನ ಮಾಡುವ ಮೂಲಕ ಇತರರನ್ನು ಪ್ರೇರೇಪಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ. ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು ಎಂದು ಸಲಹೆ ನೀಡಿದರು.
ರೋಟರಿಯ ಬಾಪೂ ಬಿರಾದಾರ ಹಾಗೂ ಡಾ. ಶ್ರೀನಿವಾಸ ನಾಯ್ಡು ಚಾರಿಟಬಲ್ ಟ್ರಸ್ಟ್‌ನವರು ತಲಾ 10 ಕಾಟ್‌ಗಳನ್ನು ದಾನ ಮಾಡಿದರು.
ಪಿಎಂಎಸ್‌ಎಸ್‌ವೈ ವೈದ್ಯಕೀಯ ಅಧೀಕ್ಷಕ ಡಾ.ಎಸ್.ರಾಜಾಶಂಕರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಸಿಎಒ ರಮೇಶ ಕಳಸದ, ಡಾ. ಸುನೀತಾ ವೆರ್ಣೇಕರ, ಡಾ. ಅನಿಲಕುಮಾರ, ಡಾ. ಕವಿತಾ ಏವೂರ, ಡಾ. ಸುರೇಶ ಹುಚ್ಚಣ್ಣವರ, ಡಾ.ಕೆ.ಎಫ್. ಕಮ್ಮಾರ ಇತರರು ಇದ್ದರು.