3000 ದಾಟಿದ ಸೊಂಕಿತರ ಸಂಖ್ಯೆ

B SHARAT DC Photo
Published on

ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಮೂರು ಸಾವಿರ ದಾಟಿದೆ. ಬುಧವಾರ ಒಟ್ಟು 175 ಹೊಸ ಪ್ರಕರಣಗಳು ದಾಖಲಾಗಿದ್ದು, ಮತ್ತೊಂದು ಸಾವು ಸಂಭವಿಸಿದೆ. ಈ ಸಾವು ಸೇರಿದಂತೆ ಮೃತರ ಸಂಖ್ಯೆ 49ಕ್ಕೇರಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ 3141ಕ್ಕೆ ತಲುಪಿದಂತಾಗಿದೆ. ಇಂದು 47 ಜನ ಚೇತರಿಸಿಕೊಂಡಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇಲ್ಲಿಯವರೆಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 1881 ಆದಂತಾಗಿದೆ. 1211 ಸಕ್ರೀಯ ಪ್ರಕರಣಗಳು ಇವೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಅವರು ಹೇಳಿದ್ದಾರೆ.
ಬುಧವಾರ 78 ವರ್ಷದ ವೃದ್ಧೆ (ಪಿ.35607) ಮೃತಪಟ್ಟಿದ್ದು, ಈಕೆ ನಗರದ ಜಮ್ ಜಮ್ ಕಾಲೊನಿಗೆ (ಹಾಗರಗಾ ರಸ್ತೆ) ಸೇರಿದವರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಈ ವೃದ್ಧೆಯನ್ನು ಕಳೆದ ದಿ. 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿ. 18ರಂದು ಇವರು ಮೃತಪಟ್ಟಿದ್ದಾರೆ. ಈಕೆಗೆ ಕರೊನಾ ಸೋಂಕು ಇರುವುದು ಇಂದು ವರದಿಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net