ಅಹಲ್ಯಾಬಾಯಿ ಹೋಳ್ಕರ್​ ಜಯಂತಿ:300 ಶಿವಲಿಂಗ ಪೂಜೆ 31ರಂದು

WhatsApp Image 2025-05-27 at 8.09.43 PM
Published on

ಕಲಬುರಗಿ: ರಾಷ್ಟ್ರಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತ್ಯೋತ್ಸವವು ಇದೆ 31ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 7.30ಕ್ಕೆ ಪೂಜ್ಯ ಶ್ರೀ ಸಿದ್ದರಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ 300 ದಂಪತಿಗಳಿಂದ 300 ಶಿವಲಿಂಗಗಳ ಪೂಜೆ ಜರುಗಲಿದೆ.

ಸಾಯಂಕಾಲ 4ಕ್ಕೆ ಪತಿ ಕಳೆದುಕೊಂಡ ಮಹಿಳಾ ಸಾಧಕರಿಗೆ ಹಾಗೂ ಮೃತ ಯೋಧರ ಪತ್ನಿಯರಿಗೆ ಸನ್ಮಾನ ಮತ್ತು ಧರ್ಮ ಸಭೆ ಆಯೋಜಿಸಲಾಗಿದೆ. ಧರ್ಮ ಸಭೆಗೆ ಕನಕಗುರು ಪೀಠದ ಪೂಜ್ಯ ಶ್ರೀ ಸಿದ್ದರಮಾನಂದ ಮಹಾಸ್ವಾಮಿ, ಶರಣಬಸವೇಶ್ವರ ಸಂಸ್ಥಾನ ಮಾತೋಶ್ರೀ ದಾಕ್ಷಾಯಣಿ ಶರಣಬಸಪ್ಪ ಅಪ್ಪನವರು ದಿವ್ಯ ಸಾನಿಧ್ಯವಹಿಸುವರು.

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರಪ್ಪ ಮರ್ತೂರ ಅಧ್ಯಕ್ಷತೆವಹಿಸುವರು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಲ್ಲಂಪ್ರಭು ಪಾಟೀಲ್, ಶಾಸಕಿ ಖನೀಜ್ ಫಾತೀಮಾ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ತಿಪ್ಪಣಪ್ಪ ಕಮಕನೂರ, ಪ್ರಭಾವತಿ, ಡಾ. ವಿಜಯಲಕ್ಷ್ಮಿ ಪರಮೇಶ, ಡಾ. ಅಮರಪ್ಪ ಪಿ. ಜಂಪ, ನಿರ್ಮಲ ಬರಗಾಲಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಸರ್ವಧರ್ಮದ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಕುರುಬ ಗೊಂಡ ಸಂಘದ ಅಧ್ಯಕ್ಷ ಯಲಗೊಂಡ ಪೂಜಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net