300 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

Snd Ration Rice
ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ಹತ್ತಿರ ಆಹಾರ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ ಅನ್ನಭಾಗ್ಯ ಪಡಿತರ ಅಕ್ಕಿ ತುಂಬಿದ ಲಾರಿ ವಶಕ್ಕೆ ಪಡೆದರು.
Published on

ಸಿಂಧನೂರು: ತಾಲೂಕಿನ ಶ್ರೀಪುರಂ ಜಂಕ್ಷನ್ ಬಳಿ ಲಾರಿಯಲ್ಲಿ ಹೊರರಾಜ್ಯಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯದ 300 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ಭಾನುವಾರ ಜಪ್ತಿ ಮಾಡಿದ್ದಾರೆ.

ಸಿಂಧನೂರು ಹಾಗೂ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸುತ್ತಲಿನ ಹಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿಯಿಂದ ಜನರು ಪಡೆದ ಅಕ್ಕಿಯನ್ನು ಕೆಜಿಗೆ 15 ರೂ.ಯಂತೆೆ ಖರೀದಿಸಿ, ಅದನ್ನು ಸಿರಗುಪ್ಪದಿಂದ ಸಿಂಧನೂರು ಕಡೆಗೆ ಸಾಗಿಸುವಾಗ ಲಾರಿ ತಡೆದು ಪರಿಶೀಲಿಸಿದಾಗ ಪಡಿತರ ಅಕ್ಕಿ ಎಂಬುದು ಖಚಿತವಾಗಿದೆ.

50 ಕೆಜಿಯ 600 ಚೀಲಗಳಲ್ಲಿದ್ದ 6.60 ಲಕ್ಷ ರೂ. ಮೌಲ್ಯದ 300 ಕ್ವಿಂ. ಪಡಿತರ ಅಕ್ಕಿ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸತೀಶ, ಗುಜರಾತ್‌ನ ಮಹ್ಮದ್ ಅಫ್ತಾಬ್ ಖೊಜರಿಯಾ ಹಾಗೂ ಲಾರಿ ಮಾಲೀಕನ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆ ನಿರೀಕ್ಷಕ ಹನುಮೇಶ ನಾಯಕ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net