300 ಮಂದಿಯಿಂದ ತುಲಾಭಾರ ಸೇವೆ

tula
Published on

ಕೋಟ: ಅಮೃತೇಶ್ವರಿ ದೇಗುಲ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಶನಿವಾರ ಬೆಳಗ್ಗೆ ಢಕ್ಕೆಬಲಿ, ದರ್ಶನ ಸೇವೆ, ತುಲಾಭಾರ ಸೇವೆ ಜರುಗಿತು.

ದೇಗುಲದ ದೇವಿ ದರ್ಶನ ಪಾತ್ರಿ ಸುರೇಶ್ ಜೋಗಿ, ಮಾರಿಕಾಂಬೆ ಪಾತ್ರಿ ಉದಯ್ ಜೋಗಿ ದೇಗುಲದ ಮೂಲಕ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಆಗಮಿಸಿ ಧಾರ್ಮಿಕ ದರ್ಶನ ನೆರವೆರಿಸಿ ಪ್ರಸಾದ ವಿತರಿಸಿದರು.

ಮಧುಸೂದನ್ ಬಾಯರಿ, ಸುಬ್ರಹ್ಮಣ್ಯ ಅಡಿಗ ಧಾರ್ಮಿಕ ವಿಧಿವಿಧಾನ ನೆರವೆರಿಸಿದರು. ಸುಮಾರು 300 ಮಂದಿ ತುಲಾಭಾರ ಸೇವೆ ಸಮರ್ಪಿಸಿದರು.

ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸದಸ್ಯರಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ. ಪೂಜಾರಿ, ಜ್ಯೋತಿ ದೇವದಾಸ ಕಾಂಚನ್, ರತನ್ ಐತಾಳ್, ಶಿವ ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ, ಅರ್ಚಕರಾದ ದಿಕ್ಷೀತ್ ಜೋಗಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net