ತ್ರಿವೇಣಿ ಸ್ಟೀಲ್ಸ್‌ನಿಂದ ಹೊಸಕೋಟೆ ಠಾಣೆಗೆ 300 ಬ್ಯಾರಿಕೇಡ್ಸ್

300 barricades for Hoskote station
300 barricades for Hoskote station
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಬೆಳೆಯುತ್ತಿರುವ ನಗರದಲ್ಲಿ ರಸ್ತೆ ಸುರಕ್ಷತೆ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿ ಎಂದು ತ್ರಿವೇಣಿ ಸ್ಟೀಲ್ಸ್ ಸಂಸ್ಥೆ 300 ಬ್ಯಾರಿಕೇಡ್‌ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಅವರಿಗೆ ಹಸ್ತಾಂತರಿಸಿತು.
ನಗರದ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ತ್ರಿವೇಣಿ ಸ್ಟೀಲ್ಸ್‌ಯಿಂದ 18 ಲಕ್ಷ ರೂ. ಮೌಲ್ಯದ 300 ಬ್ಯಾರಿಕೇಡ್‌ಗಳನ್ನು ಸಿಎಸ್‌ಆರ್ ಅನುದಾನದಡಿ ತ್ರಿವೇಣಿ ಸ್ಟೀಲ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆಶೀರ್ವಾದ್ ಅಗರ್ವಾಲ್ ಕೊಡುಗೆಯಾಗಿ ನೀಡಿದರು.
ಸರ್ಕಾರ ಪೊಲೀಸ್ ಇಲಾಖೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಕೆಲವೊಮ್ಮೆ ನೀಡಿರುವ ಸವಲತ್ತುಗಳಲ್ಲಿ ಕೊರತೆ ಕಂಡು ಬರುತ್ತದೆ. ಇಂಥ ಸಮಯದಲ್ಲಿ ತ್ರಿವೇಣಿ ಸ್ಟೀಲ್ಸ್ ಸಂಸ್ಥೆಯ ಸಾಮಾಜಿಕ ಕಳಕಳಿಯಿಂದ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ಸ್ ವಿತರಣೆ ಮಾಡುತ್ತಿರುವುದು ಇಲಾಖೆಗೆ ಸಹಕಾರಿಯಾಗಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ನಿವೃತ್ತ ಡಿವೈಎಸ್‌ಪಿ ಎನ್.ಬಿ. ಸಕ್ರಿ, ಹೊಸಕೋಟೆ ಉಪವಿಭಾಗದ ಡಿವೈಎಸ್‌ಪಿ ಶಂಕರೇಗೌಡ ಅಣ್ಣಪ್ಪ ಸಾಹೇಬ್ ಪಾಟೀಲ್, ನಿರೀಕ್ಷಕರಾದ ಅಶೋಕ್, ರಘು, ಚನ್ನೇಶ್, ತ್ರಿವೇಣಿ ಸ್ಟೀಲ್ಸ್ ಸಂಸ್ಥೆಯ ಸಿಬ್ಬಂದಿ ಸುಚಿತಾ ಅಗರ್ವಾಲ್. ವಿನುತಾ ಅಗರ್ವಾಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net