30 ರಿಂದ ಆಹಾರ ಸುರಕ್ಷತೆ ಅರಿವು ಆಂದೋಲನ

food safety
Published on

ಇಂದಿನಿಂದ ಚಿತ್ರದುರ್ಗ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆ.30 ರಿಂದ 2 ದಿನಗಳ ಕಾಲ ಜಿಲ್ಲಾ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕುರಿತು ಅರಿವು ಮೂಡಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ ಆಹಾರ ಕಲಬೆರಕೆ ಕುರಿತು ಅರಿವು ಮೂಡಿಸುವ, ಹೋಟೆಲ್, ಬೇಕರಿ, ಡಾಬಾ, ಚಿಲ್ಲರೆ, ಸಗಟು ವಹಿವಾಟುದಾರರು, ಸಾಗಾಣಿಕೆದಾರರು, ಎಪಿಎಂಸಿ ವರ್ತಕರು, ಕಮಿಷನ್ ಏಜೆಂಟರು, ಬೀದಿ-ಬದಿ ವ್ಯಾಪಾರಿಗಳು, ಮಾಂಸ, ಮೀನು ಮಾರಾಟಗಾರರಿಗೆ ನೋಂದಣಿ, ಪರವಾನಗಿ ಪಡೆಯುವಂತೆ ತಿಳಿಸುವ ಮತ್ತು ಸಂಶಯಯುತ ಹಾಗೂ ಕಲಬೆರಕೆ ಆಹಾರ ಪದಾರ್ಥಗಳ ತಪಾಸಣೆ, ವಿಶ್ಲೇಷಣೆಗಾಗಿ ಅಂದೋಲನ ಆಯೋಜಿಸಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜಶೇಖರ ಪಾಳೇದವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net