ಸಂಬಳ ಕೇಳಿದ್ದಕ್ಕೆ ಕೊಲೆ ಬೆದರಿಕೆ, 30 ಮಹಿಳೆಯರಿಂದ ದೂರು

Crime Logo
Published on

ಮುಂಡಗೋಡ: ಗಾಮೇಂಟ್ಸ್ ಕೆಲಸಕ್ಕೆ ಹೋಗಿದ್ದ 30 ಮಹಿಳೆಯರು ಕೆಲಸ ಮಾಡಿದ ಸಂಬಳ ಕೇಳಿದರೆ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ವೆಂಕಟೇಶ ನಾಯ್ಕ, ಮುಂಡಗೋಡ ತಾಲೂಕಿನ ಸಿದ್ದನಕೊಪ್ಪ ಗ್ರಾಮದ ಪ್ರಶಾಂತ ಜೀವಕ್ಕಣ್ಣನವರ ಹಾಗೂ ಮುಂಡಗೋಡ ಗಾಂಧಿನಗರದ ಗಣೇಶ ಕುಂಬಾರ ಮೇಲೆ ಪ್ರಕರಣ ದಾಖಲಾಗಿದೆ.


ಎಂಜಿ ಪ್ರೖೆವೇಟ್ ಲಿಮಿಟೆಡ್ ಗಾಮೇಂಟ್ಸ್​ನ ಮಾಲೀಕ ವೆಂಕಟೇಶ, ಸುಪ್ರವೈಸರ್​ಗಳಾದ ಪ್ರಶಾಂತ ಹಾಗೂ ಗಣೇಶನಿಗೆ ತಾಲೂಕಿನ ವಿವಿಧ ಗ್ರಾಮದ 30 ಮಹಿಳೆಯರು ಕೆಲಸ ಮಾಡಿದ್ದಕ್ಕೆ ಸಂಬಳ ಕೇಳಿದ್ದೇವೆ. ಅದರೆ, ಮೂವರು ಸೇರಿ ಅವಾಚ್ಯವಾಗಿ ನಿಂದನೆ ಮಾಡಿ ಬೈದು ನಿಮ್ಮ ಹಣವನ್ನು ಕೊಡುವುದಿಲ್ಲ ಏನು ಮಾಡುತ್ತೀರಿ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೇತ್ರಾವತಿ ಮಲ್ನಾಡದ, ಅಂಜಲಿ ವಡ್ಡರ, ಸರೋಜಾ ಮೋಟೆ, ಮಹಾದೇವಿ ವಡ್ಡರ, ಕವಿತಾ ಸುಳ್ಳಳ್ಳಿ, ನಜ್ಮಾ ಗಾಜಿಪುರ, ಜ್ಯೋತಿ ಮುರುಡೇಶ್ವರ, ಜಯಾ ವಾಲತರ, ನೇತ್ರಾವತಿ ಹಂಚಿನಮನಿ, ಜಯಮ್ಮಾ ಹುಲ್ಲಮನಿ ಸೇರಿ ಮೂವತ್ತು ಜನರು ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net