30 ವರ್ಷದಿಂದ ಡಾಂಬರು ಕಾಣದ ರಸ್ತೆ, ನರಸಯ್ಯನ ಅಗ್ರಹಾರದಿಂದ ಕಲ್ಲುದೇವನಹಳ್ಳಿ ಸಂಪರ್ಕಿಸುವ ಮಾರ್ಗ

28Rura1
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ಮಧುರೆ ಹೋಬಳಿಯ ನರಸಯ್ಯನ ಅಗ್ರಹಾರದಿಂದ ಕಲ್ಲುದೇವನಹಳ್ಳಿ ಸಂಪರ್ಕಿಸುವ ರಸ್ತೆ 30 ವರ್ಷದಿಂದ ಡಾಂಬರು ಇಲ್ಲದೆ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ನರಸಯ್ಯನ ಅಗ್ರಹಾರದಲ್ಲಿ 50 ಮನೆಗಳಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಈ ರಸ್ತೆಯಲ್ಲಿಯೇ ಕಾಡುನೂರಿನ ಶಾಲೆಗೆ ಬಂದು ಹೋಗುತ್ತಾರೆ. ಇನ್ನೂ ಮಳೆ ಬಿದ್ದರೆ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗುತ್ತದೆ. ನಡೆದುಕೊಂಡು ಹೋಗಲು ಆಗುವುದಿಲ್ಲ.

ಮುಖ್ಯವಾಗಿ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಕೆ.ಎಚ್.ರಾಮಯ್ಯ ಅವರ ಸ್ವಗ್ರಾಮಕ್ಕೆ ಇದುವರೆಗೂ ರಸ್ತೆ ನಿರ್ಮಿಸದಿರುವುದು ಬೇಸರದ ಸಂಗತಿ, 10 ವರ್ಷಗಳಿಂದ ಈ ಭಾಗದ ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರಿಸಿದರು.

ಗ್ರಾಪಂ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಗ್ರಾಪಂಗೆ ಬಂದರೂ ಕೇವಲ ಎರಡು ಕಿಮೀ ರಸ್ತೆ ನಿರ್ಮಿಸಲು ಮಿನಾಮೇಷ ಎಣಿಸುತ್ತಿರುವುದು ನೋಡಿದರೆ ಕುಟುಂಬ ರಾಜಕಾರಣ ತಾಂಡವಾಡುತ್ತಿದೆ ಎಂದು ಸ್ಥಳೀಯ ನಾಗರಿಕರು ದೂರುತ್ತಾರೆ.

ಸ್ಥಳ ಪರಿಶೀಲಿಸಿ ನರೇಗಾ ಯೋಜನೆಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಸೂಚಿಸಲಾಗುವುದು. ಸ್ಥಳೀಯ ಜನಪ್ರತಿನಿಧಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಬಹುದು. ಟಿ.ಮುರುಡಯ್ಯ, ಕಾರ್ಯನಿರ್ವಹಣಾ ಅಧಿಕಾರಿ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ತಲೆಕೆಡಿಸಿಕೊಂಡಿಲ್ಲ. ಕುಟುಂಬ ರಾಜಕಾರಣ, ಸ್ಥಳೀಯ ಜಿಪಂ, ಶಾಸಕರ ನಿರ್ಲಕ್ಷ್ಯದಿಂದಾಗಿ ಇದುವರೆಗೂ ರಸ್ತೆ ಡಾಂಬರೀಕರಣ ಮಾಡಿಲ್ಲ. ಎನ್.ಆರ್ ಮನು, ಗ್ರಾಮನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net