

ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದವನ ಮೇಲೆ ದಾಳಿದ ಮಾಡಿದ ಇಲ್ಲಿಯ ಸಿಇಎನ್ ಕ್ರೈಂ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಆತನಿಂದ 30 ಸಾವಿರ ರೂ. ಮೌಲ್ಯದ 300 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.
ಕೇಶ್ವಾಪುರ ಆಜಾದ ಕಾಲನಿಯ ಸಂದೀಪ ಚಾಕರಿ (21) ಬಂಧಿತ. ರಾಜು ಗೋಸಾವಿ ಎಂಬುವವರಿಂದ ಖರೀದಿಸಿ ತನ್ನ ಹತ್ತಿರ ಗಾಂಜಾ ಇಟ್ಟುಕೊಂಡು ಬೇರೆಡೆ ಮಾರಾಟ ಮಾಡಲು ತೆರಳುತ್ತಿದ್ದ. ಇದರ ಮಾಹಿತಿ ಅರಿತಿ ಸಿಇಎನ್ ಕ್ರೈಂ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ಸಂದೀಪನನ್ನು ಬಂಧಿಸಿ ದಸ್ತಗಿರಿ ಮಾಡಿದೆ. ಇನ್ನೊಬ್ಬ ಪರಾರಿಯಾಗಿದ್ದಾನೆ. 500 ರೂ. ನಗದು, ಮೊಬೈಲ್ ಫೋನ್ ಕೂಡ ಜಪ್ತಿ ಮಾಡಲಾಗಿದೆ.