ರಬಕವಿಯಲ್ಲಿ 30 ವಿದ್ಯಾರ್ಥಿಗಳು ಗೈರು

30 students absent from Rabakavi
ರಬಕವಿ-ಹೊಸೂರನ ಪದ್ಮಾವತಿ ಇಂಟರ್‌ನ್ಯಾಶನಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ತೆರಳುತ್ತಿರುವ ಮಕ್ಕಳು.
Published on

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಒಟ್ಟು 10 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಕನ್ನಡ ವಿಷಯದ ಪರೀಕ್ಷೆಗೆ ದಾಖಲಾಗಿದ್ದ ಒಟ್ಟು 3389 ಮಕ್ಕಳಲ್ಲಿ 30 ಮಕ್ಕಳು ಗೈರಾಗಿದ್ದು, 3359 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಅಶೋಕ ಬಸನ್ನವರ ಮತ್ತು ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪೂರ ಅವಳಿ ತಾಲೂಕಿನ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿ ಮಕ್ಕಳಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಪರೀಕ್ಷಾ ಮೇಲ್ವಿಚಾರಕರ ಮತ್ತು ಸಿಬ್ಬಂದಿಯ ಮೊಬೈಲ್‌ಗಳಿಗೂ ಅವಕಾಶ ನೀಡದೇ ಮೊಬೈಲ್ ಸಂಗ್ರಹಣಾಕಾರರ ಸುಪರ್ದಿಗೆ ಒಪ್ಪಿಸಲಾಗಿತ್ತು. ಪರೀಕ್ಷಾರ್ಥಿಗಳ ೆಟೊ ತೆಗೆಯಲೂ ಮಾಧ್ಯಮದವರಿಗೆ ಅವಕಾಶವಿರಲಿಲ್ಲ.

ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ನಕಲು ಪ್ರಕರಣಗಳು ನಡೆದಿಲ್ಲ. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ರಬಕವಿ-ಬನಹಟ್ಟಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net