ನಿವೇಶನ ಆಮಿಷವೊಡ್ಡಿ 30 ಲಕ್ಷ ರೂ. ವಂಚನೆ

Published on

ಮೈಸೂರು: ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಮಹಿಳೆಗೆ ಆಮಿಷ ತೋರಿಸಿ 30 ಲಕ್ಷ ರೂ. ವಂಚಿಸಲಾಗಿದೆ ಎಂದು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಲನಹಳ್ಳಿಯ ಪವಿತ್ರಾ, ವಿಶ್ವನಾಥ್ ಶೆಟ್ಟಿ ಮತ್ತು ಪವಿತ್ರಾ ಪುತ್ರನ ವಿರುದ್ಧ ಹಣ ಕಳೆದುಕೊಂಡ ಮನಿಷಾ ಎಂಬವರು ಪ್ರಕರಣ ದಾಖಲಿಸಿದ್ದಾರೆ. ಒಂದು ವರ್ಷದ ಹಿಂದೆ ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಪವಿತ್ರಾ ಹಾಗೂ ವಿಶ್ವನಾಥ ಶೆಟ್ಟಿ ಅವರು ಮನಿಷಾ ಅವರಿಂದ 30 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.

ವರ್ಷ ಉರುಳಿದರೂ ನಿವೇಶನ ನೀಡದಿದ್ದಾಗ ಹಣ ವಾಪಸ್ ಕೊಡುವಂತೆ ಮನಿಷಾ ಕೇಳಿದ್ದಾರೆ. ಜ.24ರಂದು ಹಣ ಕೊಡುವುದಾಗಿ ಮನಿಷಾ, ಆಕೆಯ ಪತಿ ದಿನೇಶ್‌ರನ್ನು ಪವಿತ್ರಾ ಅವರು ಮನೆಗೆ ಕರೆಸಿಕೊಂಡಿದ್ದರು. ಪವಿತ್ರಾ, ವಿಶ್ವನಾಥಶೆಟ್ಟಿ ಹಾಗೂ ಇವರ ಪುತ್ರ ಅವಾಚ್ಯವಾಗಿ ನಿಂದಿಸಿ ಮನಿಷಾ ಮತ್ತು ದಿನೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಲನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net