ಡಿಸಿಪಿ ಹೆಸರೇಳಿ 30 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ಮುಂಬೈ ಡಿಸಿಪಿ ಹೆಸರಿನಲ್ಲಿ ನಗರದ ವೈದ್ಯರೊಬ್ಬರಿಗೆ ವಿಡಿಯೋ ಕಾಲ್ ಮೂಲಕ ಭಯ ಹುಟ್ಟಿಸಿ ವಿವಿಧ ಲಿಂಕ್ ಮೂಲಕ 30.16 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಡಾ.ರಾಜೀವ್ ಮೊಸಕ್ಕೊಳಗಾದವರು.
ಫೆಡ್ ಎಕ್ಸ್ ಕಂಪನಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯು ಕೆಲ ವಸ್ತುಗಳನ್ನು ಬುಕ್ ಮಾಡಿದ್ದಾರೆ. ಅದಕ್ಕೆ ನಿಮ್ಮ ಆಧಾರ ಕಾರ್ಡ್ ನಂಬರ್ ಲಿಂಕ್ ಇದೆ ಎಂದು ಮಾತನಾಡಿದ್ದಾರೆ. ಇದಕ್ಕೆ ರಾಜೀವ್ ಅವರು ನಾನು ಯಾವುದೇ ಕೋರಿಯರ್ ಮಾಡಿಲ್ಲ ಎಂದು ಹೇಳಿದಾಗ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆ. ಇದಕ್ಕೆ ನೀವು ಮುಂಬೈ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದಿದ್ದಾರೆ.
ನಂತರ ಸ್ಕೈಪ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿದ ಅಪರಿಚಿತನು ತಾನು ಮುಂಬೈ ಡಿಸಿಪಿ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ನಂತರ ವಿವಿಧ ಖಾತೆಗಳ ಮಾಹಿತಿ ಪಡೆದು 30,16,742 ರೂ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net