

ನೆಲಮಂಗಲ : ಸುಮಾರು ದಶಕಗಳಿಂದ ಮೀಸಲು ವಿಧಾನಸಭಾ ಕ್ಷೇತ್ರದ ಸಾಕಷ್ಟು ಗ್ರಾಮಗಳಲ್ಲಿ ಮೂಲ ಸೌಕರ್ಯ ಇಲ್ಲದಿರುವುದು ಶೋಚನೀಯ. ಹೀಗಾಗಿ ವಿಶೇಷ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 30 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವಲುಕುಪ್ಪೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿ ಕಾಣದೇ ಇರುವ ರಸ್ತೆ, ಚರಂಡಿಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದ ಶಾಸಕರು, ಗೇರ್ಹಳ್ಳಿ, ಮಂಟನಕುರ್ಚಿ ಸೇರಿ ಅವಲಕುಪ್ಪೆ ಗ್ರಾಮದಲ್ಲಿ ಸುಮಾರು 1.75ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಮಾಡಲಾಗಿದೆ ಎಂದುಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ, ನಿವೃತ ಇಒ ಹನುಮಂತರಾಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯೆ ಪುಟ್ಟಮ್ಮ, ಸದಸ್ಯರಾದ ಶಿವಕುಮಾರ್, ಸಿ.ಮುನಿರಾಜು, ಕೃಷ್ಣಪ್ಪ, ಲ್ಮನಾರಾಯಣ್, ಮಾಜಿ ಅಧ್ಯಕ್ಷ ಕುಮಾರ್, ಮಾಜಿ ಸದಸ್ಯ ವೆಂಟಚಲ್ಲಯ್ಯ, ಸಿ.ಕೆ.ಹನುಮಯ್ಯ, ಚಿಕ್ಕಹನುಮಂತಯ್ಯ, ಡೇರಿ ಅದ್ಯಕ್ಷ ಗಂರಾಜು, ಕಾರ್ಯದರ್ಶಿ ಶೇಖರ್, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಹೇಮಂತ್ಕುಮಾರ್,
ಗಿರೀಶ್, ಚಂದ್ರ, ಚಂದ್ರಶೇಖರ್, ಮಂಜುನಾಥ್, ಪ್ರಸನ್ನ, ಗೋರಿನಬೆಲೆ ಗಂಗರಾಜು, ವಿನಯ್ಗೌಡ, ಭೂಸಂದ್ರ ಚಿಕ್ಕಣ್ಣ ಉಪಸ್ಥಿತರಿದ್ದರು.
ಸೋತವರನ್ನು ತೃಪ್ತಿ ಪಡಿಸಲು ಶಾಸಕನಾಗಿಲ್ಲ : ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಸರ್ಕಾರಿ ಆಸ್ಪತ್ರೆಗೆ ಅನುದಾನ ಮಂಜೂರು ಮಾಡಿಸಿದ್ದೀನಿ ಎಂದು ಇತ್ತೀಚೆಗೆ ಹೇಳಿದ್ದಾರೆ. ಆದರೆ, 2024ರ ಬಜೆಟ್ನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಜತೆಗೆ 4 ಹೋಬಳಿಯ ಜನರಿಗೆ ಅನುಕೂಲವಾಗಲುಟಿ.ಬೇಗೂರಿನಲ್ಲಿ 4 ಎಕರೆ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಅವರು ೇತ್ರದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮಾಜಿ ಶಾಸಕರು ಸ್ವತ@ ವೈದ್ಯರೇ ಆಗಿರುವುದರಿಂದ ಅವರನ್ನು ಅವರೇ ಪರೀೆ ಮಾಡಿಕೊಳ್ಳಬೇಕೆಂದು ಶಾಸಕ ಎನ್.ಶ್ರೀನಿವಾಸ್ ತಿರುಗೇಟು ನೀಡಿದರು. ಮಾಜಿ ಶಾಸಕರ ಅಧಿಕಾರ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಹಾಗೂ ಗುತ್ತಿಗೆದಾರರ ಬಳಿ ರೋಲ್ ಕಾಲ್ ಮಾಡಿದ್ದಾರೆ. ನಿಮ್ಮ ನಾಟಕವನ್ನು ನೋಡಿ ೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಬೇಕಿದ್ದರೆ ವಿಶ್ರಾಂತಿ ತೆಗೆದುಕೊಳ್ಳಲಿ, ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೆ ಅಪಪ್ರಚಾರ ಮಾಡಬಾರದು. ಸೋತವರನ್ನು ತೃಪ್ತಿ ಮಾಡಿಸಲು ನಾನು ಶಾಸಕನಾಗಿಲ್ಲ. ೇತ್ರದ ಜನರ ಋಣ ತೀರಿಸಿಲು ಶಾಸಕನಾಗಿದ್ದೇನೆ ಎಂದು ತಿಳಿಸಿದರು.
ಮಾಜಿ ಶಾಸಕರಿಗೆ ಸವಾಲು : ಕ್ಷೇತ್ರದಲ್ಲಿ ನಾನು ಹಾಗೂ ನನ್ನ ಕಡೆಯವರು ಗುತ್ತಿಗೆ ಮಾಡಿ ಹಣ ಲೂಟಿ ಮಾಡುತ್ತಿದ್ದೇವೆ ಎಂದು ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಧರ್ಮಸ್ಥಳಕ್ಕೆ ಶ್ರೀನಿವಾಸಮೂರ್ತಿ ಬರಲಿ, ನಾನೂ ಹೋಗುತ್ತೇನೆ, ಇಬ್ಬರೂ ಪ್ರಮಾಣ ಮಾಡೋಣ ಎಂದು ಶಾಸಕ ಎನ್.ಶ್ರೀನಿವಾಸ್ ಸವಾಲು ಹಾಕಿದರು. ಮಾಜಿ ಶಾಸಕರ ಜತೆಯಲ್ಲಿರುವ ಜೆಡಿಎಸ್ ಮುಖಂಡರು ಮುಂದಿನ ಚುನಾವಣೆಗೆ ಪರ್ಯಾಯ ಅಭ್ಯರ್ಥಿಯನ್ನು ತರಲು ಹೊರಟಿದ್ದಾರೆ. ಅದರ ಕಡೆ ಮಾಜಿ ಶಾಸಕರು ಗಮನ ಕೊಡಲಿ ಎಂದು ಲೇವಡಿ ಮಾಡಿದರು.