

ಹುಬ್ಬಳ್ಳಿ: ಹಮ್ ಕಾಮ್ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದೆಂದು ನಂಬಿಸಿ ನಗರದ ವೈದ್ಯರೊಬ್ಬರಿಂದ ಬರೋಬ್ಬರಿ 30.79 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ.
ನಗರದ ಡಾ. ದರ್ಶನ ಎಂಬುವರು ವಂಚನೆಗೆ ಒಳಗಾದವರು. ಇನ್‌ಸ್ಟಾಗ್ರಾಂನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಲಾಭದಾಯಕ ಹೂಡಿಕೆ ಯೋಜನೆ ಬಗ್ಗೆ ನೋಡಿದ್ದಾರೆ. ಈ ಸಂದರ್ಭದಲ್ಲಿ ಆಯಿಷಾ ಸಿಂಘಾನಿಯಾ ಎಂಬುವರು ತಾವು ಮಾಸ್ಟರ್ ಸಿದ್ಧಾರ್ಥ ಸುಕುಮಾರ ಅವರ ಸಹಾಯಕಿ ಎಂದು ಪರಿಚಯಿಸಿಕೊಂಡು ಹಮ್‌ಬ್ರೋ ಬಿಜಿನೆಸ್ ಸ್ಕೂಲ್‌ಗೆ ಸೇರಿಸಿ ನಂತರ ಹೂಡಿಕೆ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 30,79,47 ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.