

ಕಂಪ್ಲಿ: ವಾಸಿಸುವವನೇ ನೆಲದೊಡೆಯ ಯೋಜನೆಯಡಿ ಕಂದಾಯ ಗ್ರಾಮವಲ್ಲದ ಸರ್ಕಾರಿ, ಖಾಸಗಿ ಭೂಮಿಗಳಲ್ಲಿ ಮನೆ ನಿರ್ಮಿಸಿಕೊಂಡು ಮೂರ‌್ನಾಲ್ಕು ದಶಕಗಳಿಂದ ವಾಸಿಸುತ್ತಿರುವ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು.
ಹೊಸದರೋಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಡೂರು ತಾಲೂಕಿನ 21 ಗ್ರಾಮಗಳಲ್ಲಿ 3,073 ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಈ ಪೈಕಿ 2,249 ಸರ್ಕಾರಿ ಭೂಮಿ ಹಾಗೂ 824 ಖಾಸಗಿ ಭೂಮಿಯ ನಿವೇಶನದಾರರಿದ್ದಾರೆ. ದರೋಜಿ ಗ್ರಾಮದ 1,070 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಡಿಎಂಎಫ್ ವಿಶೇಷಾಧಿಕಾರಿ ಪಿ.ಎಸ್.ಮಂಜುನಾಥ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ, ಡಿಟಿ ಸುಬ್ಬಾರಾವ್ ದೇಸಾಯಿ, ಪಿಡಿಒ ಪ್ರಭುವನಗೌಡ, ಆರ್‌ಐ ಮಂಜುನಾಥ, ವಿಎ ಜಗದೀಶ ಆಚಾರ್ ಇತರರಿದ್ದರು.