3 ತಿಂಗಳೊಳಗೆ ಭೂ ಮಂಜೂರಾತಿ : ಶಾಸಕ ಮಂಜುನಾಥ್ ಭರವಸೆ

3
Published on

ಮಾಗಡಿ: ಮೂವತ್ತು 30 ವರ್ಷಗಳಿಂದ ಎಸ್‌ಸಿ/ಎಸ್‌ಟಿಗೆ ಸಮುದಾಯಕ್ಕೆ ಸೇರಬೇಕಾದ ಭೂಮಿ ಸಿಕ್ಕಿಲ್ಲ. ಇದನ್ನು ದೊರಕಿಸಿಕೊಡಲು ಪ್ರ್ರಾಮಾಣಿಕವಾಗಿ ಯತ್ನಿಸುತ್ತೇನೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಮಟ್ಟದ ಪ.ಜಾತಿ/ಪ.ವರ್ಗದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂರು ತಿಂಗಳೊಳಗೆ ಭೂಮಿ ಮಂಜೂರಾತಿ, ಪೋಡಿ, ಖಾತೆ ವಾಡಿಸಲು ಚಾಲನೆ ನೀಡಲಾಗುವುದು. ಲಾನುಭವಿಗಳ ಆಯ್ಕೆ ಸಂಬಂಧ ಸಮಿತಿ ರಚನೆಯಾಗಿದೆ. 53 ಅರ್ಜಿ ಸಲ್ಲಿಕೆಯಾಗಿದ್ದು, 50 ಅರ್ಜಿಗಳು ಪೂರ್ಣವಾಗಿವೆ. ಆದರೆ ಹಿಂದೆ ಇದ್ದ ಶಾಸಕರು ಒಂದೇ ಸಹಿ ಹಾಕಿರುವುದರಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಗಿಲ್ಲ. ಆದ್ದರಿಂದ ಲಾನುಭವಿಗಳಿಗೆ ಹಕ್ಕುಪತ್ರ ನೀಡಿದ ನಂತರ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ ಎಂದರು.

ಹಕ್ಕುಪತ್ರ ವಿತರಣೆಯಾಗದ ಬಗ್ಗೆ ಬೇಸರ: ಸಾಗುವಳಿ ಚೀಟಿ ನೀಡುವುದಾಗಿ ಕೇವಲ ಭರವಸೆ ಕೊಡುತ್ತಿದ್ದಾರೆ. 10ರಿಂದ 15 ವರ್ಷಗಳಾದರೂ ಸಾಗುವಳಿ ಚೀಟಿ ನೀಡಿಲ್ಲ. ಇದರಿಂದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಶಾಸಕರಾಗಿ 3 ವರ್ಷಗಳಿಂದ ಏನು ವಾಡುತ್ತಿದ್ದೀರಾ ಏಂದು ಚಂದೂರಾಯನಹಳ್ಳಿಯ ಕೃಷ್ಣ ಶಾಸಕರ ವಿರುದ್ದ ಬೇಸರ ವ್ಯಕ್ತ ಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಂಜುನಾಥ್, ಸಾಗುವಳಿ ಚೀಟಿ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಬೆನ್ನು ಹತ್ತಿದ್ದೇನೆ. 6 ತಿಂಗಳ ಹಿಂದಷ್ಟೇ ಸಮಿತಿ ರಚನೆಯಾಗಿದೆ. ಈ ಸಮಿತಿ ಮೂಲಕ ಅರ್ಜಿಗಳ ವಿಲೇವಾರಿ ಬಗ್ಗೆ ಪರಿಶೀಲನೆ ಮಾಡಿದ್ದು ಹಿಂದಿನ ಶಾಸಕರು ಮಾಡಿರುವ ತಪ್ಪಿನಿಂದ ಸಾಗುವಳಿ ಚೀಟಿ ನೀಡಲು ಆಗಿಲ್ಲ ಬಡವರಿಗೆ ಭೂಮಿ ಹಂಚುವ ಕೆಲಸ ಮಾಡುತ್ತೇವೆ, ಖಾತೆ ಪೋಡಿ ಮಾಡಿಸುವ ಕೆಲಸ ನಮ್ಮದು ಎಂದು ಎ.ಮಂಜುನಾಥ್ ಹೇಳಿದರು.

ತಾಪಂ ಮಾಜಿ ಸದಸ್ಯ ಸಿ.ಜಯರಾಂ ಮಾತನಾಡಿ, ಸರ್ಕಾರ ಫಲಾನುಭವಿಗಳಿಗೆ ಉಚಿತ ಭೂಮಿ ನೀಡಿದರೆ ಅಧಿಕಾರಿಗಳು ಫಲಾನುಭವಿಗಳಿಗೆ ಸರಿಯಾಗಿ ಪೋಡಿ ವಾಡಿಸಿಕೊಡುತ್ತಿಲ್ಲ. ಇದರಿಂದ ಕಚೇರಿಗೆ ಅಲೆಯುವಂತಾಗಿದೆ. ಅಧಿಕಾರಿಗಳು ದಲಿತರಿಗೆ ಮಾಡುತ್ತಿರುವ ಅನ್ಯಾನ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಪ್ರತಿಮೆ ನಿರ್ವಾಣ: ಪುರಸಭೆ ಎದುರು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಪುರಸಭೆ ಅನುಮೋದನೆ ನೀಡಬೇಕು ಹಾಗೂ ಬಾಬು ಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ನಿವೇಶನ ಕೊಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಶಾಸಕರು ಇದಕ್ಕೆ ಸಮ್ಮತಿಸಿ ಸಮಾಜ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಅವರಿಗೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್, ತಾಪಂ ಇಒ ಟಿ. ಪ್ರದೀಪ್, ವೃತ್ತ ನಿರೀಕ್ಷಕ ಬಿ. ರವಿ, ಸವಾಜ ಕಲ್ಯಾಣಾಧಿಕಾರಿ ಕುಮಾರ್ ಸ್ವಾಮಿ, ದಲಿತ ಮುಖಂಡರಾದ ಸಿ. ಜಯರಾಂ, ಮಂಜೇಶ್, ದೊಡ್ಡಿ ಲಕ್ಷ್ಮಣ್, ಬಿ.ಟಿ. ವೆಂಕಟೇಶ್, ಬೆಳಗುಂಬ ವಿಶ್ವನಾಥ್, ಪ.ಜಾತಿ/ಪ.ವರ್ಗ ದೌರ್ಜನ್ಯ ಕಾಯ್ದೆ ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಗುಡೇವಾರನಹಳ್ಳಿ ನಾಗರಾಜು, ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net