

ವಿಶೇಷ ವರದಿ ತುಮಕೂರು
ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರಿಗೆ 3 ತಿಂಗಳಾದರೂ ಸಂಬಳ ಆಗಿಲ್ಲ!. ಸರ್ಕಾರಿ ಪೇ ರೋಲ್ (ವೇತನಪಟ್ಟಿ)ಗೆ ಒಳಪಟ್ಟಿರುವ ಕಾಯಂ ಪೌರಕಾರ್ಮಿಕರು ವೇತನ ಬಾರದೆ ಪರದಾಡುತ್ತಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ 431 ಪೌರ ಕಾರ್ಮಿಕರಿದ್ದು, ನೇರ ನೇಮಕಾತಿ, ಗುತ್ತಿಗೆ ಆಧಾರದಲ್ಲಿ 210 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ನೇರ ಪಾವತಿಯಡಿ ಬರುವ ಪೌರಕಾರ್ಮಿಕರಿಗೆ ಪಾಲಿಕೆ ಸಂಬಳ ನೀಡಿದೆ. ಆದರೆ, ರಾಜ್ಯ ಸರ್ಕಾರದ ಅನುದಾನ ಬಾರದ ಹಿನ್ನೆಲೆಯಲ್ಲಿ 221 ಕಾಯಂ ಪೌರಕಾರ್ಮಿಕರಿಗೆ ಜನವರಿ, ೆಬ್ರವರಿ ತಿಂಗಳ ಸಂಬಳ ಮಾರ್ಚ್ ತಿಂಗಳ ಮೂರನೇ ವಾರವಾದರೂ ಬಂದಿಲ್ಲ.
ಅಧಿಕಾರಿ, ಸಿಬ್ಬಂದಿಗೂ ಇಲ್ಲ ವೇತನ!: ಪೌರಕಾರ್ಮಿಕರ ಜತೆಗೆ ಪಾಲಿಕೆ ಅಧಿಕಾರಿ, ಸಿಬ್ಬಂದಿಗೂ ಜನವರಿ, ೆಬ್ರವರಿ ವೇತನ ಆಗಿಲ್ಲ. ಕಾಯಂಗೊಂಡಿರುವ ಪೌರಕಾರ್ಮಿಕರು ಈಗ ಸರ್ಕಾರಿ ನೌಕರರ ಪೇ ರೋಲ್ಗೆ ಒಳಪಟ್ಟಿರುವುದು ವೇತನ ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 7ನೇ ವೇತನ ಆಯೋಗ ಜಾರಿ ಹಿನ್ನೆಲೆ ಹೆಚ್ಚುವರಿ ವ್ಯತ್ಯಾಸ ಮೊತ್ತ ಲೆಕ್ಕಾಚಾರ ತಡವಾಗಿರುವುದರಿಂದ ಸರ್ಕಾರದ ಅನುದಾನ ಬಿಡುಗಡೆ ವಿಳಂಬವಾಗಿದೆ. ತುಮಕೂರು ಪಾಲಿಕೆ ಮಾತ್ರವಲ್ಲದೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಕಾರ್ಯ ಪೌರಕಾರ್ಮಿಕರು ಜತೆಗೆ ಅಧಿಕಾರಿ, ನೌಕರರಿಗೂ ಸಹ ಎರಡು ತಿಂಗಳ ಸಂಬಳ ಆಗಿಲ್ಲ.
700 ಜನಕ್ಕೆ ಒಬ್ಬ!: ಸರ್ಕಾರದ ನಿಯಮಾವಳಿ ಪ್ರಕಾರ 700 ಜನಕ್ಕೆ ಒಬ್ಬ ಪೌರಕಾರ್ಮಿಕ ಇರಬೇಕು. ಅದರಂತೆ 7 ಸಾವಿರ ಜನಸಂಖ್ಯೆಗೆ ಅನುಗುಣವಾಗಿ 10 ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಹಾಗಾಗಿ, ಪ್ರತಿ ವಾರ್ಡ್ಗೆ 10 ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಜತೆಗೆ ವಾಣಿಜ್ಯ ಕಟ್ಟಡಗಳು ಹೆಚ್ಚಿರುವ ಕಡೆ ಹೆಚ್ಚು ಪೌರಕಾರ್ಮಿಕರನ್ನು ನೇಮಿಸಲಾಗಿದೆ.
ಸ್ವಾಮಿ 3 ತಿಂಗಳಾಗುತ್ತಾ ಬಂತು ಸಂಬಳ ಬಂದು. ಹೆಂಡತಿ, ಮಕ್ಕಳು ಸಂಸಾರ ಸಾಗಿಸಲು ಸಾಲ ಮಾಡಬೇಕು. ಯುಗಾದಿ ಹಬ್ಬ ಬರುತ್ತಿದೆ, ಅಷ್ಟರೊಳಗಾದರೂ ಸರ್ಕಾರ ಸಂಬಳ ಬಿಡುಗಡೆ ಮಾಡಲಿ. ಇಲ್ಲವಾದರೆ ಸಾಲಸೋಲ ಮಾಡಿ ಹಬ್ಬ ಮಾಡಬೇಕಾದೀತು.| ಹೆಸರು ಹೇಳಲಿಚ್ಛಿಸದ ಪೌರಕಾರ್ಮಿಕನಗರದ ನಗರದ ಸ್ವಚ್ಛತೆಗೆ ದುಡಿಯುವ ಪೌರಕಾರ್ಮಿಕರು ಸಂಬಳವನ್ನೇ ನೆಚ್ಚಿಕೊಂಡಿದ್ದು, ಎರಡೂವರೆ ತಿಂಗಳಾದರೂ ಸಂಬಳ ಆಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಬಜೆಟ್ ಅಲೋಕೇಷನ್ ಇಲ್ಲವೆಂದು ಸಬೂಬು ಹೇಳಲಾಗುತ್ತಿದೆ. ಸರ್ಕಾರ ಈಗಲಾದರೂ ಎಲ್ಲಾ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಮೊದಲ ಆದ್ಯತೆಯಲ್ಲಿ ಸಂಬಳ ನೀಡಬೇಕು.| ಎನ್.ಕೆ.ಸುಬ್ರಮಣ್ಯ ಪೌರಕಾರ್ಮಿಕರಪಾಲಿಕೆಯಲ್ಲಿ ಮಾತ್ರವಲ್ಲ ಎಲ್ಲ 10 ಮಹಾನಗರ ಪಾಲಿಕೆಯ ಕಾಯಂ ಪೌರಕಾರ್ಮಿಕರು, ಸಿಬ್ಬಂದಿ, ನೌಕರರ ಸಂಬಳ ಆಗಿಲ್ಲ. ನೇರ ಪಾವತಿಯಡಿ ಬರುವ ಪೌರಕಾರ್ಮಿಕರಿಗೆ ಈಗಾಗಲೇ ಸಂಬಳ ನೀಡಲಾಗಿದೆ. ಕಾಯಂ ನೌಕರರು, ಸಿಬ್ಬಂದಿಗೆ ಹಣಕಾಸು ವರ್ಷ ಕೊನೆಯಲ್ಲಿ ಈ ಸಮಸ್ಯೆ ಎದುರಾಗುತ್ತೆ. ಸರ್ಕಾರದ ಅನುದಾನ ಬಂದ ತಕ್ಷಣ ಎಲ್ಲರಿಗೂ ವೇತನ ಆಗಲಿದೆ. ಇತ್ತೀಚೆಗೆ ಕೆಲವು ಪೌರಕಾರ್ಮಿಕರನ್ನು ಕಾಯಂಗೊಳಿಸಿದ್ದು, ಅವರ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ಅವರಿಗೂ ವೇತನ ವಿಳಂಬವಾಗಿದೆ.| ಬಿ.ವಿ.ಅಶ್ವಿಜ ಮಹಾನಗರ ಪಾಲಿಕೆ ಆಯುಕ್ತೆ ತುಮಕೂರು