3 ಕೋಟಿ ರೂ. ವೆಚ್ಚದಲ್ಲಿ 9 ಬಸ್ ಖರೀದಿ

bus
ಸಂಡೂರಿನ ಡಿಪೋ ಅವರಣದಲ್ಲಿ 9 ಬಸ್‌ಗಳ ಸಂಚಾರಕ್ಕೆ ಶಾಸಕ ಈ.ತುಕಾರಾಮ್ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಮಾಜಿ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ ಇತರರಿದ್ದರು.
Published on

ಸಂಡೂರು: ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನದಲ್ಲಿ ಖರೀದಿಸಿದ 9 ಬಸ್‌ಗಳಿಗೆ ಶಾಸಕ ಈ.ತುಕಾರಾಮ್ ಬುಧವಾರ ಚಾಲನೆ ನೀಡಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಖನಿಜ ಪ್ರತಿಷ್ಠಾನದ 3 ಕೋಟಿ ರೂ.ವೆಚ್ಚದಲ್ಲಿ 9 ಬಸ್‌ಗಳನ್ನು ಖರೀದಿಸಲಾಗಿದೆ. ತೋರಣಗಲ್ ಹೋಬಳಿಯ ಅಂತಾಪುರ, ವಿಠಲಾಪುರ ಹಾಗೂ ಚೋರನೂರು ಹೋಬಳಿಯ ಗ್ರಾಮಗಳಿಗೆ ಬಸ್‌ಗಳನ್ನು ಬಿಡಬೇಕು. ಬೆಳಗ್ಗೆ 8.30ರಿಂದ 10 ಹಾಗೂ ಸಂಜೆ 4ರಿಂದ ರಾತ್ರಿ 7ರವರೆಗೆ ಬಸ್‌ಗಳು ಸಂಚರಿಸಲು ಕ್ರಮವಹಿಸಿ ಎಂದು ಡಿಪೋ ಪ್ರಭಾರ ವ್ಯವಸ್ಥಾಪಕ ಚಂದ್ರಶೇಖರ್‌ಗೆ ಸೂಚಿಸಿದರು.


ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜ್, ತಾಂತ್ರಿಕ ಶಿಲ್ಪಿ ಪಾಲಾಕ್ಷಿ ಹರತಿ, ಆಡಳಿತಾಧಿಕಾರಿ ಟಿ.ದೇವರಾಜ್, ತಾಪಂ ಇಒ ಷಡಕ್ಷರಯ್ಯ, ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ಈರೇಶ ಸಿಂಧೆ, ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಘಟಕ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಜಯಣ್ಣ, ಜೆಬಿಟಿ ಬಸವರಾಜ್, ಕಾಳಿಂಗೇರಿ ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net