ಚಾಕು ಇರಿದವನಿಗೆ 3 ವರ್ಷ ಜೈಲು

Crime Logo
Published on

ಕಾರವಾರ:ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದವನಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5 ಲಕ್ಷ 2 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಭಟ್ಕಳದ ಧರ್ಮರಾಜ ತಿಮ್ಮಪ್ಪ ನಾಯ್ಕ ಶಿಕ್ಷೆಗೊಳಗಾದವ. 2015 ರಲ್ಲಿ ಭಟ್ಕಳದ ಬೆಳಕೆಯ ಹರ್ಷ ಹೋಟೆಲ್ ಬಳಿ ಘಟನೆ ನಡೆದು, ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಧರ್ಮರಾಜ ನಾಯ್ಕ ಅವರನ್ನು ಬಂಽಸಿ, ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ತಾವು ಮದುವೆಯಾಗಲು ನೋಡಿದ ಹೆಣ್ಣನ್ನು ಚಾಡಿ ಹೇಳಿ ತಪ್ಪಿಸಿದರು ಎಂಬ ಕಾರಣ ನೀಡಿ ಮಂಜುನಾಥ ಮಾಸ್ತಯ್ಯ ನಾಯ್ಕ ಹಾಗೂ ಮಾದೇವ ನಾಯ್ಕ ಅವರಿಗೆ ಚಾಕುವಿನಿಂದ ಧರ್ಮರಾಜ್ ಇರಿದಿದ್ದ. 32 ದಾಖಲೆಗಳನ್ನು ಗುರುತಿಸಿ, 19 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಧಿಶರಾದ ಡಿ.ಎಸ್.ವಿಜಯಕುಮಾರ್ ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ 5 ಲಕ್ಷ ರೂ.ಗಳನ್ನು ಮಂಜುನಾಥ ನಾಯ್ಕರಿಗೆ ಹಾಗೂ 2 ಸಾವಿರ ರೂ.ಗಳನ್ನು ಮಾದೇವ ನಾಯ್ಕರಿಗೆ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ತನಿಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net