ಕೆಂಪು ಕಲ್ಲಿನ ಅಟ್ಟಿ ಮಗುಚಿ ಮಗು ಸಾವು

dead
Published on


ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತರು ಎಂಬಲ್ಲಿ ಕೆಂಪು ಕಲ್ಲಿನ ಅಟ್ಟಿ ಬಿದ್ದು ಸೋಮವಾರ ಮೂರುವರೆ ವರ್ಷ ಪ್ರಾಯದ ಮಗು ಸಾವನ್ನಪ್ಪಿದೆ.

ಅಶ್ರಫ್ ಮತ್ತು ಸಮೀಮಾ ದಂಪತಿಯ ಪುತ್ರ ಮೊಹಮ್ಮದ್ ನೌಶೀರ್ ಮೃತಪಟ್ಟ ಮಗು. ಕಟ್ಟಡ ನಿರ್ಮಾಣಕ್ಕೆಂದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನಟ್ಟಿಯ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಲ್ಲಿನ ಅಟ್ಟಿ ಮಗುಚಿದೆ.

ಪರಿಸರದಲ್ಲಿ ಆಟವಾಡುತ್ತಿದ್ದ ಮಗು ಕಾಣದಾದಾಗ ಮನೆ ಮಂದಿ ಹುಡುಕಾಟ ನಡೆಸಿದಾಗ ಮಗು ಕಲ್ಲಿನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವುದು ಕಂಡು ಬಂದಿತ್ತು.
ಮೃತ ಬಾಲಕ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net