ಗಂಟಲಲ್ಲಿ ಗೋಡಂಬಿ ಸಿಲುಕಿ 3 ವರ್ಷದ ಗಂಡು ಮಗು ಮೃತ್ಯು

Godambi
Published on

ಪುತ್ತೂರು: ಗೋಡಂಬಿ ಬೀಜ ತಿನ್ನುತ್ತಿರುವಾಗ ಗಂಟಲಲ್ಲಿ ಸಿಲುಕಿ 3 ವರ್ಷದ ಮಗುವೊಂದು ಮೃತಪಟ್ಟ ಘಟನೆ ಪುತ್ತೂರು ಹೊರವಲಯದ ಸಾಲ್ಮರ ಎಂಬಲ್ಲಿ ನಡೆದಿದೆ.

ಸಾಲ್ಮರ ಉರಮಾಲ್ ನಿವಾಸಿ ಇಸಾಕ್ ಎಂಬವರ 3 ವರ್ಷದ ಗಂಡು ಮಗು ನವಾಜ್ (ಹೆಸರು ಬದಲಿಸಲಾಗಿದೆ) ಬುಧವಾರ ಮಧ್ಯಾಹ್ನ ಮನೆಯಲ್ಲಿ ಗೋಡಂಬಿ ತಿನ್ನುತ್ತಿರುವಾಗ ಗಂಟಲಲ್ಲಿ ಸಿಲುಕಿ ಬಾಲಕ ಆಸ್ವಸ್ಥಗೊಂಡಿದ್ದು, ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಳಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಯಿತು.

ಆ ವೇಳೆಗಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net