

ನೆಲಮಂಗಲ: ನಗರದ ಉದ್ಯಮಿ ಅಶೋಕ ಮಾಲೀಕತ್ವದ ಪ್ಲಾಸ್ಟಿಕ್ ಗೋದಾಮಿನ ಮೇಲೆ ನಗರಸಭೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿ ಲಾಂತರ ರೂಪಾಯಿ ಮೌಲ್ಯದ 3 ಟನ್ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ನಿರ್ದೇಶಕ ಭೀಮ್ಸಿಂಗ್ ಗೌಗಿ ಮಾತನಾಡಿ, ಕೇಂದ್ರ ಹಾಗೂ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ. ಈ ನಿಟ್ಟಿನಲ್ಲಿ ಕಾರ್ಖಾನೆ, ಅಂಗಡಿ ಗೋದಾಮಿನ ಮೇಲೆ ದಾಳಿ ಮಾಡಲಾಗುತ್ತಿದೆ. 6 ತಿಂಗಳ ಹಿಂದೆ ಅಶೋಕ ಅವರಿಗೆ ಸಂಬಂಧಿಸಿದ ಅಂಗಡಿ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಸ್ತುಗಳನ್ನು ವಶ ಪಡಿಸಿಕೊಂಡು ತಿಳಿವಳಿಕೆ ನೀಡಲಾಗಿತ್ತು. ಸರ್ಕಾರದ ನಿರ್ದೇಶನ ಪಾಲಿಸದೆ ಮತ್ತೆ ಪ್ಲಾಸ್ಟಿಕ್ ಚೀಲ ಮಾರಾಟ ಮಾಡುತ್ತಿದ್ದಾರೆ. ಇದೇ ತರಹ ಮುಂದುವರಿದರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸಿ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದರು.
ನಗರಸಭೆ ಆರೋಗ್ಯ ನಿರೀಕ್ಷಕ ಬಿ.ಜಿ.ರವಿಕುಮಾರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ೇತ್ರ ಸಹಾಯಕ ದೊಡ್ಡಯ್ಯ, ಸಿಬ್ಬಂದಿ ರೇವಣ್ಣ, ವರುಣ್, ನಿಂಗೇಗೌಡ, ಶಶಿವಕುಮಾರ್ ಇದ್ದರು.