ಕೆರೆಯಲ್ಲಿ ಈಜಲು ಹೋಗಿ ಮೂವರು ಶಾಲಾ ಮಕ್ಕಳು ಸಾವು: ಹಾನಗಲ್​ನಲ್ಲಿ ದುರ್ಘಟನೆ

Death
Published on

ಹಾವೇರಿ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

SSLC ಓದುತ್ತಿದ್ದ ಮಂತಗಿ ಗ್ರಾಮದ ಅಹ್ಮದ್ ಅಂಚಿ (15) ಸಾಹಿಲ್ ಡೊಂಗ್ರೆ (15) ಅಖ್ತರ್ ರಾಜಾ ಯಲವಟ್ಟಿ (15) ಮೃತ ದುರ್ದೈವಿಗಳು.

ಶಾಲೆಗೆ ಇಂದು ರಜೆ ಹಿನ್ನಲೆಯಲ್ಲಿ ಹೊಂಡಕ್ಕೆ ಈಜಲು ಹೋಗಿದ್ದ ಬಾಲಕರು ಹೊಂಡದಲ್ಲಿ ಈಜಲಾಗದೆ ಒಬ್ಬರನ್ನೊಬ್ಬರು ಕಾಪಾಡಲು ಹೋಗಿ ಬಾಲಕರು ದುರ್ಮರಣವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಕ್ಕಳನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಹಾನಗಲ್ ತಹಶೀಲ್ದಾರ ಮತ್ತು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net