

ವಿಜಯವಾಣಿ ಸುದ್ದಿಜಾಲ ಧಾರವಾಡ
ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಚಿನ್ನದ ಚೈನ್ ಮತ್ತು ಮೊಬೈಲ್ ದೋಚಿದ್ದ ಮೂವರನ್ನು ತಾಲೂಕಿನ ಗರಗ ಠಾಣೆಯ ಪೊಲೀಸರು ಬಂಽಸಿದ್ದಾರೆ. ಧಾರವಾಡದ ಶಂಕರ ಕೊಕಾಟೆ, ದೀಪಕ ಗೊಲ್ಲರ ಮತ್ತು ತಾಲೂಕಿನ ಕಲ್ಲೂರ ಗ್ರಾಮದ ರವಿ ದಂಡಿನ ಬಂಽತ ಆರೋಪಿಗಳು.
ಆರೋಪಿಗಳು -ೆಬ್ರವರಿ 3ರಂದು ರಾತ್ರಿ 10 ಗಂಟೆ ಸುಮಾರಿಗೆ ಕೊಟಬಾಗಿ- ಕಲ್ಲೂರ ಗ್ರಾಮಗಳ ನಡುವೆ ಕಲ್ಲೂರ ಗ್ರಾಮದ ಜೈಲಾನಿ ಮಾಬುಬಅಲಿ ಸೈಯ್ಯದನವರ ಎಂಬಾತನನ್ನು ಅಡ್ಡಗಟ್ಟಿ ತಡೆದು ಹಲ್ಲೆ ನಡೆಸಿದ್ದರು. ಆತನ ಬಳಿ ಇದ್ದ 15 ಗ್ರಾಂ ತೂಕದ ಚಿನ್ನದ ಚೈನ್, ಮೊಬೈಲ್ ದರೋಡೆ ಮಾಡಿದ್ದರು. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ದೋಚಿದ್ದ ಚೈನ್, ಮೊಬೈಲ್ ಮತ್ತು ದರೋಡೆಗೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯÁಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಪಿಐ ಸಮೀರ ಮುಲ್ಲಾ, ಪಿಎಸ್‌ಐಗಳಾದ ಸಿದ್ರಾಮಪ್ಪ ಉನ್ನದ, ಎ.ಎಂ. ಮಂಟೂರ, ಸಿಬ್ಬಂದಿಗಳಾದ ಉಳುವೇಶ ಸಂಪಗಾವಿ, ಈರಪ್ಪ ಲಮಾಣಿ, ಶಂಕರಗೌಡ ರಾಮನಗೌಡ್ರ ತನಿಖಾ ತಂಡದಲ್ಲಿದ್ದರು.