

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ)ಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ ರೈಲ್ವೆ ಹಾಲ್ಟ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಪ್ರತಿದಿನ 3 ಜೋಡಿ ರೈಲುಗಳ ಮೂಲಕ ಸೇವೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ವಿಮಾನಯಾನ ಮಾಡಲು ಕೆಐಎಗೆ ತಲುಪಲು ಸಂಚಾರ ದಟ್ಟಣೆ ಸೇರಿ ಇನ್ನಿತರ ಕಾರಣಗಳಿಂದ ಅನುಭವಿಸುತ್ತಿರುವ ಸಮಸ್ಯೆ ನಿವಾರಣೆಗೆ ಕೆಐಎ ಸಮೀಪ ರೈಲ್ವೆ ಹಾಲ್ಟ್ ನಿಲ್ದಾಣ ನಿಮಿರ್ಸಲಾಗಿದೆ. ಅಲ್ಲಿ ಶ್ರೀದಲ್ಲಿ ರೈಲು ಸೇವೆಯೂ ಆರಂಭವಾಗಲಿದೆ. ಅದಕ್ಕೂ ಮುನ್ನ ರೈಲು ಸೇವೆ ಯಾವ ರೀತಿ ಇರಬೇಕು ಎಂಬುದನ್ನು ನಿರ್ಧರಿಸಿರುವ ನೈಋತ್ಯ ರೈಲ್ವೆ, ಈ ಮಾರ್ಗದಲ್ಲಿ 3 ಜೋಡಿ ರೈಲುಗಳು ಸಂಚರಿಸುವಂತೆ ಮಾಡಲಾಗುತ್ತೆ. ಕೆಎಸ್ಆರ್ ರೈಲು ನಿಲ್ದಾಣದಿಂದ ದೇವನಹಳ್ಳಿ ನಿಲ್ದಾಣದವರೆಗೆ ಈ ರೈಲುಗಳು ಸೇವೆ ನೀಡಲಿದೆ. ಮಾರ್ಗ ಮಧ್ಯದಲ್ಲಿ ಬರುವ ಕೆಐಎ ಹಾಲ್ಟ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುತ್ತದೆ. ಜನ ಸಂದಣಿ ಹೆಚ್ಚಿರುವ ಸಮಯವನ್ನು ಗುರುತಿಸಿ, ಆ ಅವಧಿಯಲ್ಲಿ ರೈಲುಗಳು ಸಂಚರಿಸಲಿವೆ.
ಸಮಯ ಉಳಿತಾಯ: ವಿಮಾನ ನಿಲ್ದಾಣದವರೆಗೆ ರೈಲು ಸೇವೆ ನೀಡುತ್ತಿರುವ ಕಾರಣ ಕೆಐಎಗೆ ತೆರಳುವವರಿಗೆ ಸಮಯ ಉಳಿತಾಯವಾಗಲಿದೆ. ಕೆಎಸ್ಆರ್ ರೈಲು ನಿಲ್ದಾಣದಿಂದ ಕೆಐಎ ಹಾಲ್ಟ್ ನಿಲ್ದಾಣಕ್ಕೆ 30&40 ನಿಮಿಷದಲ್ಲಿ ತಲುಪಬಹುದಾಗಿದೆ. ಬಳಿಕ ಆ ಹಾಲ್ಟ್ ನಿಲ್ದಾಣದಿಂದ ವಿಮಾನನಿಲ್ದಾಣಕ್ಕೆ ಶೆಟಲ್ ಬಸ್ಗಳ ಮೂಲಕ 10ರಿಂದ 15 ನಿಮಿಷದಲ್ಲಿ ತೆರಳಬಹುದು. ಒಟ್ಟಾರೆ 40ರಿಂದ 50 ನಿಮಿಷದೊಳಗಾಗಿ ಮೆಜೆಸ್ಟಿಕ್ನಿಂದ ವಿಮಾನನಿಲ್ದಾಣಕ್ಕೆ ಹೋಗುವ ವ್ಯವಸ್ಥೆಯಾಗಲಿದೆ.
ಸದ್ಯದಲ್ಲೇ ಸೇವೆ ಆರಂಭ : ಹಾಲ್ಟ್ ನಿಲ್ದಾಣ ನಿರ್ಮಾಣ ಕಾರ್ಯ ಕಳೆದೆರಡು ತಿಂಗಳ ಹಿಂದೆಯೇ ರ್ಪೂಣಗೊಂಡಿದೆ. ಆದರೆ, ರೈಲ್ವೆ ಮಂಡಳಿಯಿಂದ ಹಾಲ್ಟ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಇನ್ನೂ ಅನುಮತಿ ದೊರೆತಿಲ್ಲ. ಆ ಕುರಿತಂತೆ ಈಗಾಗಲೆ ನೈಋತ್ಯ ರೈಲ್ವೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದ್ದು, ಸದ್ಯದಲ್ಲೇ ಅನುಮತಿ ದೊರೆಯುವ ಸಾಧ್ಯತೆಗಳಿವೆ. ಅದಾದ ನಂತರ ರೈಲು ನಿಲುಗಡೆ ವ್ಯವಸ್ಥೆಯಾಗಲಿದೆ.
ಸಕಲ ವ್ಯವಸ್ಥೆ: ನೈಋತ್ಯ ರೈಲ್ವೆ ಮತ್ತು ಬಿಐಎಎಲ್ ಸಹಯೋಗದಲ್ಲಿ ಹಾಲ್ಟ್ ನಿಲ್ದಾಣ ನಿಮಿರ್ಸಲಾಗಿದೆ. ಅದಕ್ಕೆ ಬಿಐಎಎಲ್ 3 ಕೋಟ ರೂ. ವ್ಯಯಿಸಿದ್ದು, ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಟಿಕೆಟ್ ಕೌಂಟರ್, ವಾಹನ ನಿಲುಗಡೆಗೆ ಅವಕಾಶ, ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಪ್ರಯಾಣಿಕರು ಕುಳಿತುಕೊಳ್ಳಲು ಬೆಂಚ್ಗಳ ಅಳವಡಿಕೆ ಮಾಡಲಾಗಿದೆ.