

ಮಂಜುನಾಥ ಎಸ್. ಅಂಗಡಿ ಧಾರವಾಡ
ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ತಲಾ 5 ಕೆಜಿ ಉಚಿತ ಅಕ್ಕಿ ನೀಡುತ್ತಿದೆ. ಉಳಿದ 5 ಕೆಜಿ ಅಕ್ಕಿಯ ಬದಲು ಕುಟುಂಬದ ಯಜಮಾನಿಯ ಖಾತೆಗೆ ಹಣ ಜಮೆ ಮಾಡುತ್ತಿದೆ. ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೆ ರಾಜ್ಯಾದ್ಯಂತ 3 ತಿಂಗಳಿAದ ಹಣ ಜಮೆಯಾಗಿಲ್ಲ.
ಡಿಬಿಟಿ ಮೂಲಕ ಜಮೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದ ನಂತರ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಮತ್ತು ಬಾಕಿ 5 ಕೆಜಿ ಬದಲು 34 ರೂಪಾಯಿಯಂತೆ 170 ರೂಪಾಯಿ ಜಮೆ ಮಾಡುತ್ತಿದೆ. ಪಡಿತರ ಅಕ್ಕಿ ಪಡೆದ ಕೆಲ ದಿನಗಳಲ್ಲಿ ಬಿಪಿಎಲ್ ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲರ ಹಣ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ನೇರ ಜಮೆಯಾಗುತ್ತಿತ್ತು.
ತಿಂಗಳಿಗೆ ಬೇಕು ಸರಾಸರಿ 675 ಕೋಟಿ ರೂ.:
ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ ಯೋಜನೆಗೆ ರಾಜ್ಯಾದ್ಯಂತ ತಿಂಗಳಿಗೆ ಸರಾಸರಿ 675 ಕೋಟಿ ರೂ. ಅನುದಾನ ಬೇಕು. ಅಕ್ಟೋಬರ್ ಅಂತ್ಯದವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ನವೆಂಬರ್‌ನಿAದ ಜನವರಿವರೆಗಿನ 3 ತಿಂಗಳ ಅಂದಾಜು 2,025 ಕೋಟಿ ರೂ. ಬಾಕಿ ಇದೆ. ಕುಟುಂಬದ ಯಜಮಾನಿಯ ಖಾತೆಗೆ ಶೀಘ್ರದಲ್ಲೇ ಬಾಕಿ ಹಣ ಜಮೆಯಾಗಲಿದೆ ಎನ್ನುತ್ತಾರೆ ಆಹಾರ ಇಲಾಖೆ ಅಽಕಾರಿಗಳು.
ಪಂಚ ಗ್ಯಾರಂಟಿಗಳು 2023ರ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ, ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2,000 ರೂ. ನೀಡುವ ಗೃಹಲಕ್ಷಿ÷್ಮÃ, ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಅಕ್ಕಿ ಒದಗಿಸುವ ಅನ್ನಭಾಗ್ಯ ಯೋಜನೆ, ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆ ಮತ್ತು ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ನೀಡುವ ಯುವನಿಽ ಯೋಜನೆಗಳನ್ನು ಘೋಷಿಸಿತ್ತು. 4 ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುವ ಯೋಜನೆಗೆ ಹಲವಾರು ಅಡೆತಡೆಗಳು ಎದುರಾಗಿದ್ದವು.
ನಮ್ಮ ಕುಟುಂಬದಲ್ಲಿ 4 ಸದಸ್ಯರಿದ್ದೇವೆ. ಸರ್ಕಾರ ಘೋಷಿಸಿದಂತೆ 5 ಕೆಜಿ ಅಕ್ಕಿ ಬದಲು ಖಾತೆಗೆ ಹಣ ಜಮಾ ಮಾಡುತ್ತಿತ್ತು. ನಮ್ಮ ಕುಟುಂಬಕ್ಕೆ ತಿಂಗಳಿಗೆ 680 ರೂ. ಬರುತ್ತಿತ್ತು. ನವೆಂಬರ್‌ನಿ0ದ ಈವರೆ ಹಣ ಜಮೆಯಾಗಿಲ್ಲ. - ಮನಿಷಾ ಮೀರಜಕರ, ಧಾರವಾಡದ ಕೆಲಗೇರಿಯ ಫಲಾನುಭವಿ