ಚಂಡಿಕೇಶ್ವರಿ ಸೌಹಾರ್ದ ಸಹಕಾರಿಗೆ 3 ಲಕ್ಷ ರೂ.ಲಾಭ

3hos1p chandikeshwari
ಕರಿಮನೆ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರಿ ವಾರ್ಷಿಕ ಸಭೆಯಲ್ಲಿ ಎಸ್.ಜೆ.ಹೂವಪ್ಪ ಗೌಡ ಮಾತನಾಡಿದರು. ಪ್ರವೀಣ ಕೆ.ಗೌಡ, ಕೆ.ಕೆ.ರಾಮಣ್ಣ, ವಿಲಾ ಡಿಸೋಜ, ಗುರುಮೂರ್ತಿ, ಎಂ. ರತ್ನಾಕರ, ಎಚ್.ವಾಸಪ್ಪ ಇತರರಿದ್ದರು.
Published on

ಹೊಸನಗರ: ಗ್ರಾಮೀಣ ಭಾಗದಲ್ಲಿ ಬಡ, ಮಧ್ಯಮ, ಕೂಲಿಕಾರ್ಮಿಕರಿಗೆ ಆರ್ಥಿಕ ಚೈತನ್ಯ ಒದಗಿಸುವಲ್ಲಿ ಸಹಕಾರಿ ಬ್ಯಾಂಕ್ ಪಾತ್ರ ಮಹತ್ವದ್ದಾಗಿದೆ ಎಂದು ಕರಿಮನೆ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಎಸ್.ಜೆ.ಹೂವಪ್ಪ ಗೌಡ ಹೇಳಿದರು. ಕರಿಮನೆ ಶ್ರೀ ಚಂಡಿಕೇಶ್ವರಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಹಕಾರಿಯ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಮತ್ತು ವಿವಿಧ ಗ್ರಾಹಕರ ಸಹಕಾರದಿಂದ ಕಳೆದ ಆರ್ಥಿಕ ವರ್ಷದಲ್ಲಿ 3.04 ಲಕ್ಷ ಲಾಭ ಗಳಿಸಿದೆ ಎಂದರು. ಸಭೆಯಲ್ಲಿ ಮರಣೋತ್ತರ ನಿಧಿ ಸ್ಥಾಪನೆ, ಕಚೇರಿಯ ಸಂಪೂರ್ಣ ಗಣಕೀಕರಣ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು. ಉಪಾಧ್ಯಕ್ಷ ಪ್ರವೀಣ ಕೆ.ಗೌಡ, ಸಂಸ್ಥಾಪನಾ ಅಧ್ಯಕ್ಷ ಕೆ.ಕೆ.ರಾಮಣ್ಣ, ನಿರ್ದೇಶಕರಾದ ಎಚ್.ವಾಸಪ್ಪ, ಎಸ್.ಎಸ್.ಸುಧಾಕರ್, ಎ.ಮೂರ್ತಿ, ಎಂ.ರತ್ನಾಕರ, ಸುಂದರಾಂಗಿ ನಾಗೇಶ ಭಟ್, ವಿಲಾ ಡಿಸೋಜ, ಗುರುಮೂರ್ತಿ, ಯೋಗೇಂದ್ರ, ಎಚ್.ಪಿ.ನಾಗೇಂದ್ರ, ಟಿ.ಆರ್.ಸುರೇಶ್, ಮಹೇಂದ್ರ ಹಿರಿಯ ಸಹಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net