ರಂಗಮಂದಿರ ನಿರ್ಮಾಣಕ್ಕೆ 3 ಲಕ್ಷ ರೂ. ಅನುದಾನ

Cluster level Sports
Published on

ರಟ್ಟಿಹಳ್ಳಿ: ತಾಲೂಕಿನ ಯಡಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವಶ್ಯವಿರುವ ರಂಗಮಂದಿರ ನಿರ್ಮಾಣಕ್ಕೆ 3 ಲಕ್ಷ ರೂಪಾಯಿ ಅನುದಾನ, ಕೊಳವೆಬಾವಿಗೆ ಮೋಟರ್ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ತಾಲೂಕಿನ ಯಡಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ದೊಡ್ಡಗುಬ್ಬಿ ಕ್ಲಸ್ಟರ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ಗುರುತಿಸಿ, ಅವಶ್ಯವಿರುವೆಡೆ ಹೊಸ ಕೊಠಡಿಗಳನ್ನು ಒದಗಿಸುವ ಕೆಲಸ ಮಾಡಬೇಕು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ. ದೈಹಿಕ ಸದೃಢತೆ ಮತ್ತು ಚೈತನ್ಯ ನೀಡಲು ಕ್ರೀಡೆಗಳು ಸಹಾಯಕವಾಗುತ್ತವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡಬಾರದು. ಶಿಕ್ಷಣ ಮತ್ತು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಕರಬಸನಗೌಡ ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ, ಎಸ್‌ಡಿಎಂಸಿ ಸದಸ್ಯರಾದ ಲೋಕನಗೌಡ ಗಂಗಪ್ಪನವರ, ಶಿವನಗೌಡ ಗಂಗಪ್ಪನವರ, ಬಸವರಾಜಯ್ಯ ಮಠದ, ನಾಗರಾಜ ಬಿಲ್ಲಹಳ್ಳಿ, ಗ್ರಾ.ಪಂ. ಸದಸ್ಯರಾದ ಬಸವರಾಜ ಬಾಗೂರು, ಪ್ರವೀಣ ಗಂಗಪ್ಪನವರ, ಶಂಭುಲಿಂಗಯ್ಯ, ಬಸನಗೌಡ ಬನ್ನಿಹಟ್ಟಿ, ಹಾಲನಗೌಡ ಮಾಜಿಪಾಟೀಲ, ಮುಖ್ಯ ಶಿಕ್ಷಕ ಸಿ.ಡಿ. ಕರಿಯಣ್ಣನವರ, ಸಿಆರ್‌ಪಿ ಚೇತನ ಬಣಕಾರ, ಮಹೇಶ ಮಾಸಣಗಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಬಿದರಿ ಗ್ರಾಮಸ್ಥರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net