3 ದಿನಗಳ ಪ್ರಾಧ್ಯಾಪಕರ ಕಾರ್ಯಾಗಾರ ಯಶಸ್ವಿ

21Jaggu4-Web
ಬೆಳಗಾವಿ ಗೋಗಟೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ. ಬಿಧನ್ ಪ್ರಮಾಣಿಕ, ಡಾ. ರುಮಾ ಘೋಷ, ಡಾ.ಸಿದ್ದಪ್ಪ ಪಾಟೀಲ, ಡಾ.ಮಹೇಶ್ ಪದಕಿ, ಡಾ. ರವಿರಾಜ್ ಕುಲಕರ್ಣಿ, ಡಾ. ನರೇಂದ್ರನಾಥ ಘೋಷ್, ಡಾ. ಸಿ.ವಿ. ಯೆಳಮಗ್ಗದ, ಡಾ.ಎಂ.ಎಸ್. ಪಾಟೀಲ ಇತರರು ಇದ್ದರು.
Published on

ಬೆಳಗಾವಿ: ನಗರದ ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗ ಜ.17ರಿಂದ 19ರವರೆಗೆ ಆಯೋಜಿಸಿದ್ದ ‘ನ್ಯಾನೋ ತಂತ್ರಜ್ಞಾನದ ಸವಾಲುಗಳು ಮತ್ತು ಭವಿಷ್ಯ’ ಕುರಿತಾದ 3 ದಿನಗಳ ಪ್ರಾಧ್ಯಾಪಕರ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ಪೂರ್ಣಗೊಂಡಿತು.
ರಾಜ್ಯದ ವಿವಿಧ ಮಹಾವಿದ್ಯಾಲಯದಿಂದ 40 ಅಧ್ಯಾಪಕರು ಭಾಗವಹಿಸಿದ್ದರು.

ಪ್ರಸ್ತುತ ಹಾಗೂ ಭವಿಷ್ಯದಲ್ಲಿ ನ್ಯಾನೋ ತಂತ್ರಜ್ಞಾನದ ಸಮಗ್ರ ಬಳಕೆ ಸೇರಿ ವಿವಿಧ ವಿಷಯಗಳ ಕುರಿತು ಗೋವಾದ ಐಐಟಿ ಸಹಾಯಕ ಪ್ರಾಧ್ಯಾಪಕ ಡಾ. ಬಿಧನ್ ಪ್ರಮಾಣಿಕ, ಧಾರವಾಡ ಐಐಟಿ ಸಹಾಯಕ ಪ್ರಾಧ್ಯಾಪಕಿ ಡಾ. ರುಮಾ ಘೋಷ, ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ನ್ಯಾನೋ ಮತ್ತು ವಸ್ತು ವಿಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಡಾ.ಸಿದ್ದಪ್ಪ ಪಾಟೀಲ, ಬೆಂಗಳೂರಿನ ಜೈನ ವಿಶ್ವವಿದ್ಯಾನಿಲಯದ ನ್ಯಾನೋ ಮತ್ತು ಮೆಟೀರಿಯಲ್ ಸೈನ್ಸಸ್ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಪದಕಿ, ಕೆಎಲ್‌ಎಸ್ ಜಿಐಟಿ, ಬೆಳಗಾವಿಯ ನ್ಯಾನೊಸಿನ್ಸ್ ಮತ್ತು ನ್ಯಾನೊತಂತ್ರಜ್ಞಾನ ಕೇಂದ್ರದ ಸಂಯೋಜಕ ಡಾ. ರವಿರಾಜ್ ಕುಲಕರ್ಣಿ, ಗೋವಾದ ಬಿಟ್ಸ್ ಪಿಲಾನಿಯ ಪ್ರಾಧ್ಯಾಪಕ ಡಾ.ನರೇಂದ್ರನಾಥ ಘೋಷ್ ಮಾಹಿತಿ ಒದಗಿಸಿದರು.

ಬೆಂಗಳೂರು ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರದ ವಿಜ್ಞಾನಿ ಡಾ. ಸಿ.ವಿ. ಯೆಳಮಗ್ಗದ, ಡಾ.ಎಂ.ಎಸ್. ಪಾಟೀಲ, ಡಾ. ರವಿರಾಜ ಕುಲಕರ್ಣಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net