

ಬೆಂಗಳೂರು: ಫೋಕ್ಸ್ ವ್ಯಾಗನ್ ಸಹಯೋಗದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಆಯೋಜಿಸಿರುವ 3 ದಿನಗಳ ಮೋಟೋಫೆಸ್ಟ್ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ಸಿಗಲಿದೆ. ಜಯನಗರದ 4ನೇ ಬ್ಲಾಕ್ನ ಎಂಇಎಸ್ ಮೈದಾನದಲ್ಲಿ ಫೆ.16ರವರೆಗೆ ವಾಹನ ಮೇಳ ನಡೆಯಲಿದ್ದು, ಹೊಸ ಕಾರುಗಳು ಹಾಗೂ ಬೈಕ್ಗಳನ್ನು ಖರೀದಿಸಲು ಗ್ರಾಹಕರಿಗೆ ಉತ್ತಮ ಅವಕಾಶ ಇದಾಗಿದೆ. ಚಿತ್ರನಟ ಡಾಲಿ ಧನಂಜಯ್ ಮತ್ತು ನಟಿ ಅಮೃತಾ ಅಯ್ಯಂಗಾರ್ ಮಧ್ಯಾಹ್ನ 12.30ಕ್ಕೆ ಫೆಸ್ಟ್ಗೆ ಚಾಲನೆ ನೀಡಲಿದ್ದಾರೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ಎಂ.ಡಿ. ಆನಂದ ಸಂಕೇಶ್ವರ, ಜಯನಗರ ಶಾಸಕಿ ಸೌಮ್ಯಾರೆಡ್ಡಿ ಮತ್ತು ಸ್ಥಳೀಯ ಪಾಲಿಕೆ ಸದಸ್ಯೆ ನಾಗರತ್ನ ರಾಮಮೂರ್ತಿ ಉಪಸ್ಥಿತರಿರುತ್ತಾರೆ. ಯಾವ ವಾಹನ ಗಳು ಆಕರ್ಷಕವಾಗಿವೆ, ಯಾವುದನ್ನು ಖರೀದಿಸಿದರೆ ಸೂಕ್ತ ಎಂಬ ಬಗ್ಗೆ ಗ್ರಾಹಕರಿಗೆ ಮಾಹಿತಿ ಸಿಗಲಿದೆ.
ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿ ವಿವಿಧ ಬ್ರಾಂಡ್ಗಳ, ವಿನ್ಯಾಸಗಳ ತಂತ್ರಜ್ಞಾನ ಮತ್ತು ಹೊಸ ಅಳವಡಿಕೆ ಹೊಂದಿರುವ ವಾಹನಗಳನ್ನು ಮೋಟೋ ಫೆಸ್ಟ್ ಪರಿಚಯಿಸಲಿದೆ. ಹೋಂಡಾ, ನಿಸ್ಸಾನ್, ದಕ್ಷಿಣ್ ಹೋಂಡಾ, ಮಾರುತಿ ಸುಜುಕಿ ಅರೇನಾ, ಟಿವಿಎಸ್ ಮೋಟಾರ್ಸ್, ಜೆಕೆ ಸ್ಮಾರ್ಟ್ ಟೈರ್ಸ್ ಸೇರಿ ವಿವಿಧ ಕಂಪನಿಗಳು ತಮ್ಮ ವಿವಿಧ ತಂತ್ರಜ್ಞಾನ ಮತ್ತು ವಿನ್ಯಾಸದ ವಾಹನಗಳನ್ನು ಗ್ರಾಹರಿಗೆ ಫೆಸ್ಟ್ನಲ್ಲಿ ಪ್ರದರ್ಶಿಸಲಿವೆ. ಪ್ರದರ್ಶನ ವೇದಿಕೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಬೆಲೆಗಳಲ್ಲಿ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಬ್ಯಾಂಕ್ ಪಾರ್ಟನರ್ ಆಗಿ ಕೆನರಾ ಬ್ಯಾಂಕ್ ಭಾಗವಹಿಸಲಿದೆ. ಹೆಚ್ಚಿನ ಮಾಹಿತಿಗೆ ಕೆನ್ನಿ (ಮೊ: 8884432339) ಅವರನ್ನು ಸಂರ್ಪಸಿ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು.