ಮೈಸೂರಿನ 2 ಕಡೆ ಮರ ಮುರಿದು ಬಿದ್ದು 3 ಕಾರು, 1 ಆಟೋ ಜಖಂ

3 cars and 1 auto were damaged after a tree fell on 2 sides of Mysore
Published on

ಮೈಸೂರು: ನಗರದ ಎರಡು ಕಡೆಗಳಲ್ಲಿ ಬುಧವಾರ ಮರ ಹಾಗೂ ಮರದ ಬೃಹತ್ ಕೊಂಬೆಯೊಂದು ಧರೆಗುರುಳಿ ಮೂರು ಕಾರು ಹಾಗೂ ಒಂದು ಆಟೋ ಜಖಂಗೊಂಡಿದೆ.

ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದ ಬಳಿ ಮರದ ಬೃಹತ್ ಗಾತ್ರದ ಕೊಂಬೆ ಮುರಿದು ಎರಡು ಕಾರುಗಳು, 1 ಆಟೋ ಜಖಂ ಗೊಂಡಿತು. ಮೈಸೂರು- ನಂಜನಗೂಡು ರಸ್ತೆಯ ಬ್ರಿಗೇಡ್ ಮೌಂಟೇನ್ ವ್ಯೆ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಪೊಟರೆ ಬಿದ್ದಿದ್ದ ಗುಲ್ಮೊಹರ್ ಮರವೊಂದು ಬಿದ್ದು 1 ಕಾರು ಜಖಂಗೊಂಡಿದೆ. ಸ್ಥಳಕ್ಕೆ ನಗರ ಪಾಲಿಕೆಯ ಅಭಯ ತಂಡ ಭೇಟಿ ನೀಡಿ ಮರವನ್ನು ತೆರವುಗೊಳಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net