ಬೆಂಕಿ ತಗುಲಿ 3 ಎಕರೆ ಕಬ್ಬು ಭಸ್ಮ

Sugercane Field in Haliyala
Published on

ಕಿಕ್ಕೇರಿ : ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಸುಮಾರು 3 ಎಕರೆಯಷ್ಟು ಕಬ್ಬು ನಾಶವಾಗಿದೆ.

ರೇಣುಕಾ ದೇವರಾಜು ಅವರು ಸರ್ವೇ ನಂಬರ್ 36ರಲ್ಲಿರುವ 6 ಎಕರೆ ಭೂಮಿಯಲ್ಲಿ 4 ಎಕರೆಗೆ ಕಬ್ಬು ಹಾಕಿದ್ದರು. ಕಬ್ಬಿಗೆ 8ತಿಂಗಳಾಗಿದ್ದು, ಮೂರ‌್ನಾಲ್ಕು ತಿಂಗಳ ನಂತರ ಕಬ್ಬು ಕಟಾವು ಮಾಡಲು ತೀರ್ಮಾನಿಸಿದ್ದರು. ಶುಕ್ರವಾರ ಬೆಳಗ್ಗೆ ಕಬ್ಬಿನ ಗರಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಇದನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನವರು ಬೆಂಕಿ ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದರು. ಬೆಂಕಿಯ ಕೆನ್ನಾಲಿಗೆಗೆ ಸುಮಾರು 3 ಎಕರೆಯಷ್ಟು ಕಬ್ಬು ನಾಶವಾಗಿದೆ.

ಕಿಕ್ಕೇರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಕಿನ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿ ದಿನೇಶ್, ಸಚಿನ್, ಯಮನಪ್ಪ, ಪಾಟೀಲ್ ಭಾಗವಹಿಸಿದ್ದರು.

02ಕೆಕೆಆರ್1: ಕಿಕ್ಕೇರಿ ಹೋಬಳಿ ಬಸವನಹಳ್ಳಿ ಗ್ರಾಮದ ರೈತ ರೇಣುಕಾ ದೇವರಾಜು ಅವರ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ಬಿದ್ದಿರುವುದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net