3.98 ಲಕ್ಷ ರೂ. ಸಂಗ್ರಹ

01BTP01 (1)
ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಲೆಕ್ಕಿಗರ ತಂಡ ಹುಂಡಿ ಏಣಿಸುತ್ತಿರುವುದು.
Published on

ಬೆಟ್ಟದಪುರ: ಇಲ್ಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹುಂಡಿಯಲ್ಲಿ ಈ ಬಾರಿ 3.98 ಲಕ್ಷ ರೂ. ಸಂಗ್ರಹವಾಗಿದೆ.

ಮಂಗಳವಾರ ದೇವಸ್ಥಾನ ಆವರಣದಲ್ಲಿ ಕಂದಾಯ ಇಲಾಖೆ ಉಪ ತಹಸೀಲ್ದಾರ್ ಶಶಿಧರ್ ಹಾಗೂ ದೇವಸ್ಥಾನದ ಅರ್ಚಕ ಸತೀಶ್ ಕಶ್ಯಪ್ ನೇತೃತ್ವದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು. ಇದೇ ಪ್ರಥಮ ಬಾರಿಗೆ ಇಷ್ಟು ಹಣ ಸಂಗ್ರಹವಾಗಿರುವುದು ಎಂದು ಹೇಳಲಾಗಿದೆ. ಏಣಿಕೆ ಕಾರ್ಯದಲ್ಲಿ ಗ್ರಾಮ ಲೆಕ್ಕಿಗರ ತಂಡ ಭಾಗಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net