

ಹುಬ್ಬಳ್ಳಿ: ಮನೆಯ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ತಿಜೋರಿಯಲ್ಲಿದ್ದ 3.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಹೆಬಸೂರ ಗ್ರಾಮದಲ್ಲಿ ನಡೆದಿದೆ.
ಕಿರಣ ಕೆ. ಅವರ ಮನೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ತಾಳಿ, 50 ಸಾವಿರ ರೂ. ಮೌಲ್ಯದ ಲಾಕೆಟ್, ಮುತ್ತಿನ ಸರ, 27 ಸಾವಿರ ರೂ. ಮೌಲ್ಯದ ಸುತ್ತುಂಗುರ, 25 ಸಾವಿರ ರೂ. ಮೌಲ್ಯದ ದೇವರ ತಾಳಿ, 50 ಸಾವಿರ ರೂ. ಮೌಲ್ಯದ ಜುಮುಕಿ, 45 ಸಾವಿರ ರೂ. ಮೌಲ್ಯದ ಕೈಗಡಿಯಾರ ಕಳ್ಳತನವಾಗಿದೆ. ಗಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.