3.90 ಲಕ್ಷ ರೂ. ಮೌಲ್ಯದ 65 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆ

IMG_20210613_145028
Published on

ಮಂಗಳೂರು: ನಗರದ ಹೊರ ವಲಯದ ಮಂಜನಾಡಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3.90 ಲಕ್ಷ ರೂ. ಮೌಲ್ಯದ 65 ಗ್ರಾಂ ಎಂಡಿಎಂಎ ಡ್ರಗ್ಸ್ ನ್ನು ಕೊಣಾಜೆ ಪೊಲೀಸರು ಪತ್ತೆ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿಗಳಾದ ಶಫೀಕ್ ಮತ್ತು ಅಲ್ತಾಫ್ ಬಂಧಿತರು. ಇವರಿಂದ ಸಾಗಾಟಕ್ಕೆ ಬಳಸಿದ್ದ ಕಾರು, ಮೊಬೈಲ್ ಸೇರಿದಂತೆ ಒಟ್ಟು 9 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಮತ್ತು ಕಾಸರಗೋಡಿನಲ್ಲಿ ಮಾರಾಟ ಮಾಡಲು ಈ ಡ್ರಗ್ಸ್ ಬೆಂಗಳೂರು ಕೆಮ್ಮನಹಳ್ಳಿಯಿಂದ ತರುತ್ತಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net