

ರಾಯಚೂರು ಬೇಸಿಗೆ ರಜೆ ಹಾಗೂ ಬಿರು ಬಿಸಿಲಿನಲ್ಲಿಯೂ ಮಂತ್ರಾಲಯದ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಹುಂಡಿಯಲ್ಲಿ ಗಣನೀಯ ಏರಿಕೆ ಖಂಡಿದ್ದು, ಕಳೆದ 28 ದಿನಗಳಲ್ಲಿ 3.79 ಕೋಟಿ ರೂ.ರೂಪಾಯಿ ಭಕ್ತರಿಂದ ಕಾಣಿಕೆ ಸಂಗ್ರಹವಾಗಿದೆ.
ಶ್ರೀಮಠದಲ್ಲಿ ಭಕ್ತರು ಹಾಗೂ ಸಿಬ್ಬಂದಿಗಳಿಂದ ಮಂಗಳವಾರ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಿ ಸಂಜೆ ಪೂರ್ಣಗೊಳಿಸಿದ್ದು, ಈ ಪೈಕಿ 3.66 ಕೋಟಿ ರೂ.ಮೌಲ್ಯದ ನೋಟುಗಳು, 12.21 ಲಕ್ಷದ ನಾಣ್ಯಗಳು, 74 ಗ್ರಾಂ ಚಿನ್ನಾಭರಣ, 1830 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆ ಬಂದಿವೆ ಎಂದು ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.