3.70 ಲಕ್ಷ ರೂ. ಆನ್‌ಲೈನ್ ವಂಚನೆ

3.70 ಲಕ್ಷ ರೂ. ಆನ್‌ಲೈನ್ ವಂಚನೆ
Published on

ಹಾಸನ: ಕ್ಯುಎಲ್‌ಒಎಫ್ ಎಂಬ ಆನ್‌ಲೈನ್ ಆಪ್‌ಗೆ ಹಣ ಹಾಕಿದರೆ ಹೆಚ್ಚಿನ ಹಣ ಪಡೆಯಬಹುದೆಂದು ನಂಬಿಸಿದ ವಂಚಕ ಹಾಸನ ನಗರದ ವ್ಯಕ್ತಿಯೊಬ್ಬರಿಂದ ಪೇಟಿಯಂ ಮೂಲಕ 3.70 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾನೆ.
ಸಂತ್ರಸ್ತ ವ್ಯಕ್ತಿಗೆ ಜೂ.1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ಕ್ಯುಎಲ್‌ಒಎಫ್ ಎಂಬ ಆನ್‌ಲೈನ್ ಆಪ್‌ಗೆ ಹಣ ಹಾಕಿದರೆ ಹೆಚ್ಚಿನ ಹಣ ಪಡೆಯಬಹುದೆಂದು ತಿಳಿಸಿದ್ದಾನೆ. ವಂಚಕನ ಮಾತು ನಂಬಿದ ಸಂತ್ರಸ್ತ ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯ ಪೇಟಿಯಂನಿಂದ ಜೂ.1ರಿಂದ ಜೂ.30ರವರೆಗೆ ಒಟ್ಟು 37 ಬಾರಿ ಪೇಟಿಯಂ ಮೂಲಕ ಒಟ್ಟು 3,70,000 ಹಣವನ್ನು ವರ್ಗಾವಣೆ ಮಾಡಿದ್ದಾರೆ. ಯಾವುದೇ ಹಣ ವಾಪಸ್ ಬಾರದಿದ್ದಾಗ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಗುರುವಾರ ಹಣ ಕಳೆದುಕೊಂಡ ವ್ಯಕ್ತಿ ಹಾನಸ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net