ಪಾಲಿಕೆ ಅನುದಾನದಿಂದ ಜನಪರ ಕಾರ್ಯ : ಡಾ.ಭರತ್ ಶೆಟ್ಟಿ ಹೇಳಿಕೆ

New Project (6)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ನಮ್ಮ ಸರ್ಕಾರ ಇಲ್ಲದೆ ಇದ್ದರೂ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮಂಗಳೂರು ಮಹಾನಗರ ಪಾಲಿಕೆ ಅನುದಾನ ಬಳಸಿಕೊಂಡು ಈ ಭಾಗದ ಕಾರ್ಪೋರೇಟರ್ ಶ್ವೇತಾ ಪೂಜಾರಿ ಅವರು ಜನರ ಬೇಡಿಕೆಯಾದ ಕುಡಿಯುವ ನೀರು, ರಸ್ತೆ ಚರಂಡಿ ಅಭಿವೃದ್ಧಿಗೆ ಶ್ರಮ ವಹಿಸಿದ್ದಾರೆ. ಇದಕ್ಕಾಗಿ ಕಾರ್ಪೋರೇಟರ್, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಸುರತ್ಕಲ್ ಪೂರ್ವ 2ನೇ ವಾರ್ಡ್‌ನ ಶ್ರೀ ದುರ್ಗಾಂಬಾ ದೇವಸ್ಥಾನದ ಬಳಿ 3.50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ರಸ್ತೆ ಕಾಂಕ್ರೀಟ್, ರಸ್ತೆ ಡಾಂಬರು, ಮಳೆ ನೀರಿನ ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಮೇಯರ್ ಮನೋಜ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆಶ್ರಿತ್ ನೋಂಡ, ಕಾರ್ಪೋರೇಟರ್ ಶ್ವೇತಾ ಪೂಜಾರಿ, ಉತ್ತರ ಮಂಡಲ ಸಹಕಾರಿ ಪ್ರಕೋಷ್ಟ ಸಂಚಾಲಕ ಅಶೋಕ್ ಶೆಟ್ಟಿ, ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ, 2ನೇ ವಾರ್ಡ್ ಅಧ್ಯಕ್ಷ ಸುರೇಂದ್ರ ಸುವರ್ಣ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಿನಕರ ಇಡ್ಯಾ, ಮಂಗಳೂರು ಉತ್ತರ ಕೋಶಾಧಿಕಾರಿ ಪುಷ್ಪರಾಜ್ ಕರ್ಕೇರ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್. ಮತ್ತಿತರರು ಉಪಸ್ಥಿತರಿದ್ದರು.

ಬಸ್‌ಸ್ಟಾೃಂಡ್‌ಗೆ ಗುದ್ದಲಿಪೂಜೆ

ಮನಪಾ ವ್ಯಾಪ್ತಿಯ ಇಡ್ಯಾ 6ನೇ ವಾರ್ಡ್‌ನ ಕಟ್ಲ ಕ್ರಾಸ್ ಬಳಿ ಬಸ್ ತಂಗುದಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ.ಭರತ್ ಶೆಟ್ಟಿ, ಸುರತ್ಕಲ್ ಹಿಂದು ರುದ್ರಭೂಮಿಗೆ ಅಳವಡಿಸಲಾದ ಹೈಮಾಸ್ಟ್ ದೀಪ, ಎಲ್‌ಇಡಿ ದೀಪ ಹಾಗೂ ಕಟ್ಲ ಕ್ರಾಸ್‌ನಿಂದ ದಿವ್ಯರಾಜ್ ಸರ್ಕಲ್‌ವರೆಗೆ ಅಳವಡಿಸಲಾದ ದಾರಿದೀಪ ಉದ್ಘಾಟಿಸಿದರು. ಮೇಯರ್ ಮನೋಜ್ ಕುಮಾರ್, ಮನಪಾ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್., ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಿನಕರ್ ಇಡ್ಯಾ, ವಾರ್ಡ್ ಅಧ್ಯಕ್ಷ ಶಶಿಧರ ಕಟ್ಲ, ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್ ಎಚ್‌ಎಸ್‌ಆರ್ ಸಂತೋಷ್ ಪೈ, ವರುಣ್ ಚೌಟ, ಕಾರ್ಪೋರೇಟರ್ ಶ್ವೇತಾ ಪೂಜಾರಿ, ಮಾಜಿ ಕಾರ್ಪೋರೇಟರ್ ಗುಣಶೇಖರ ಶೆಟ್ಟಿ, ಅಶೋಕ್ ಶೆಟ್ಟಿ, ಮಹಾಬಲ ಪೂಜಾರಿ ಕಡಂಬೋಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net