

ಕೊಲ್ಹಾರ: ತಾಲೂಕಿನ ಬಳೂತಿ ಗ್ರಾಮದ ಮಲ್ಲವ್ವ ಹೆಬ್ಬಿ ಎನ್ನುವ ರೈತ ಮಹಿಳೆಯ ಹಣಿಮ್ಯಾ ಎಂಬ ಹೆಸರಿನ ಎತ್ತು 3.5 ಲಕ್ಷ ರೂ. ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದ ಒಂದು ವರ್ಷದ ಹೋರಿಯನ್ನು 35 ಸಾವಿರ ರೂಪಾಯಿಗೆ ಮಲ್ಲವ್ವರ ಮಗ ಪುಂಡಲಿಕ ಹೆಬ್ಬಿ ಖರೀದಿ ಮಾಡಿ ಬಳೂತಿ ಗ್ರಾಮದ ತಮ್ಮ ಮನೆಯಲ್ಲಿ ಸಾಕುತ್ತಿದ್ದರು. ಈ ಎತ್ತು ನಿಮಿಷದ ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಹಲವಾರು ಕಡೆ ಬಹುಮಾನ ಪಡೆದು ಹೆಸರುವಾಸಿಯಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎತ್ತು ಪ್ರಸಿದ್ಧಿಯಾಗಿದೆ.
ಈ ಎತ್ತನ್ನು ಹಲಗಲಿ ಗ್ರಾಮದ ಸಂಗಪ್ಪ ಕಜ್ಜಿಡೋಣಿ ಎಂಬ ರೈತರು 3.5 ಲಕ್ಷ ರೂಪಾಯಿಗೆ ಖರೀದಿಸಿದ್ದು ಬಳೂತಿ ಗ್ರಾಮದ ರೈತರಿಗೆ ಆಶ್ಚರ್ಯ ಉಂಟು ಮಾಡಿದೆ. ಜಗದೀಶ ಸುನಗದ, ಶ್ರೀಶೈಲ ಗಾಮನ್ನವರ, ಶೇಖಪ್ಪ ಮಟ್ಟಿಹಾಳ, ಅರವಿಂದ ಮನಗೂಳಿ, ಹಣಮಂತ ಪಡಶೆಟ್ಟಿ, ಬಸವರಾಜ ಔರಸಂಗ ಇತರರಿದ್ದರು.