3.32 ಲಕ್ಷ ರೂ. ಆಭರಣ ಕಳ್ಳತನ

Crime Logo
Published on

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ೩.೩೨ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ನಗರದ ಹಳೇ ಜೇವರ್ಗಿ ರಸ್ತೆಯ ಪಿ ಆ್ಯಂಡ್ ಟಿ ಕ್ವಾಟರ್ಸ್ ಹತ್ತಿರದ ನವಜೀವನ ನಗರದಲ್ಲಿ ನಡೆದಿದೆ. ನಾಮದೇವ ಜ್ಯಾಂತೆ ಅವರ ಕುಟುಂಬ ದಸರಾ ನಿಮಿತ್ತ ಭಾಲ್ಕಿ ತಾಲೂಕಿನ ಭಾತಂಭ್ರಾ ಗ್ರಾಮಕ್ಕೆ ಕುಟುಂಬ ಸಮೇತ ಹೋಗಿದ್ದಾರೆ. ವಾಪಸ್ ಬಂದಾಗ ಮನೆಯ ಅಲಮಾರಾದಲ್ಲಿ ಇಟ್ಟಿದ್ದ ೧೦ ಗ್ರಾಂ ನೆಕ್ಲೆಸ್, ೧೦ ಗ್ರಾಂ ಝುಮ್ಕಿ, ೫ ಗ್ರಾಂ ಕಿವಿಯೋಲೆ, ೫ ಗ್ರಾಂ ಬೋರಮಾಳ, ೨ ಗ್ರಾಂ ಉಂಗುರ, ೪ ಗ್ರಾಂ ಮಗುವಿನ ಓಲೆ, ೫ ಗ್ರಾಂ ಕೊರಳ ಪದಕ, ೫ ಗ್ರಾಂ ಎರಡು ಸುತ್ತು ಉಂಗುರ, ೯ ತೊಲೆ ಕಾಲಚೈನ್, ೫ ತೊಲೆ ಮಗುವಿನ ಗೆಜ್ಜೆ, ೭ ತೊಲೆ ಬೆಳ್ಳಿ ಕುಂಕುಮ ಡಬ್ಬಿ, ೧ ತೊಲೆ ಬೆಳ್ಳಿ ಕಾಲುಂಗುರ, ಹಾಗೂ ನಗದು ಹಣ ೬೫೦೦ ರೂ. ಸೇರಿ ಒಟ್ಟು ೩.೩೨ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವುದು ತಿಳಿದಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net