3.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಗ್ಲೋಬಲೆ ಇನ್‌ವೆಸ್ಟರ್ ಸ್ಟಾಕ್ ಟ್ರೇಡರ್ಸ್‌ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವಿಪುಲ್ ಎಂಬಾತನಿಂದ 3.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಟೆಲಿಗ್ರಾಂಗೆ ಬಂದ ಮೆಸೇಜ್ ನಂಬಿದ ವಿಪುಲ್ ಮೊದಲು 10 ಸಾವಿರ ರೂ. ಹೂಡಿಕೆ ಮಾಡಿದ್ದಾರೆ. ನಂತರ ಇದಕ್ಕೆ ಶೇ. 5ರಷ್ಟು ಲಾಭಾಂಶ ಪಡೆದಿದ್ದಾರೆ. ಹೆಚ್ಚಿನ ಲಾಭದಾಸೆಗೆ 3,32,100 ರೂ. ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ವಂಚನೆಗೆ ಒಳಗಾಗಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net