ಮೀನುಗಾರಿಕಾ ಸಹಕಾರ ಸಂಘಕ್ಕೆ ೩.೨೧ ಲಕ್ಷ ನಿವ್ವಳ ಲಾಭ

22 ckm 3
ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ಮೀನುಗಾರಿಕಾ ಸಹಕಾರ ಸಂಘ ಸರ್ವ ಸದಸ್ಯರ ೩೮ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ರಾಜಾ ಅಹ್ಮದ್ ಉದ್ಘಾಟಿಸಿದರು. ಹಿರೇಮಗಳೂರು ರಾಮಚಂದ್ರ, ಕವನ, ರಾಧಾಮಣಿ, ಬಿ.ಎಂ.ಶಿವಣ್ಣ, ಎ.ಎಂ.ರಾಮೇಗೌಡ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಮೀನುಗಾರಿಕಾ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೩.೨೧ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿ ಆರ್ಥಿಕವಾಗಿ ಬೆಳವಣಿಗೆ ಹೊಂದುವ ಮೂಲಕ ಮೀನುಗಾರರ ಅಭಿವೃಧ್ದಿಗೆ ಸಹಕರಿಸುತ್ತಿದೆ ಎಂದು ಸಂಘದ ಅಧ್ಯಕ್ಷ ರಾಜಾ ಅಹ್ಮದ್ ತಿಳಿಸಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ೨೦೨೩-೨೪ನೇ ಸಾಲಿನ ಮೀನುಗಾರಿಕಾ ಸಹಕಾರ ಸಂಘ ಮೇದರಹಳ್ಳಿ ಸರ್ವ ಸದಸ್ಯರ ೩೮ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೨,೫೦೦ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದಲಾಗಿದ್ದು ಸುಮಾರು ೫ ಲಕ್ಷ ರೂ. ಸಾಲ ವಿತರಿಸಲಾಗಿದೆ. ಜೊತೆಗೆ ಮೀನುಗಾರರಿಗೆ ಅವಶ್ಯವಿರುವ ಬಲೆ ಹಾಗೂ ದೋಣಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಬೆಳವಾಡಿ, ರಾಮೇಶ್ವರ ಕೆರೆಗೆ ಮೀನುಮರಿ ಬಿಟ್ಟು ಮೀನುಗಾರಿಕೆಗೆ ಉತ್ತೇಜಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸಂಘವು ೫.೨೦ ಲಕ್ಷ ರೂ. ಸಾಲವನ್ನು ವಿತರಿಸಿ ೨.೨೨ ಲಕ್ಷ ರೂ. ಬಡ್ಡಿಯನ್ನು ವಸೂಲಾತಿ ಮಾಡಲಾಗಿದೆ. ಒಟ್ಟಾರೆ ೭.೪೩ ಲಕ್ಷ ಸಂಘವು ವಸೂಲಿ ಮಾಡಿಕೊಂಡಿದೆ. ಸಂಘದ ಸದಸ್ಯರ ೮೯ ಕುಟುಂಬಗಳಿಗೆ ಯಶಸ್ವಿನಿ ಕಾರ್ಡ್ ಮಾಡಿಕೊಟ್ಟಿದ್ದು, ಈ ಪೈಕಿ ೧೦ ಕುಟುಂಬಗಳು ವೈದ್ಯಕೀಯ ಪ್ರಯೋಜನವನ್ನು ಪಡೆದುಕೊಂಡಿವೆ ಎಂದು ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ಹಿರೇಮಗಳೂರು ರಾಮಚಂದ್ರ ಮಾತನಾಡಿ, ಮೀನುಗಾರರಿಗೆ ಸರ್ಕಾರದಿಂದ ನಗರ ಹಾಗೂ ಗ್ರಾಮಾಂತರದಲ್ಲಿ ಹೆಚ್ಚುವರಿ ಮನೆಗಳ ಅವಶ್ಯಕತೆಯಿದೆ. ಪ್ರಸ್ತುತ ಮನೆ ಕಟ್ಟಡ ನಿರ್ಮಿಸಲು ನೀಡುತ್ತಿರುವ ಅನುದಾನ ಕಡಿಮೆಗೊಂಡ ಪರಿಣಾಮ ಹೆಚ್ಚಿನ ಮೊತ್ತವನ್ನು ವಿತರಿಸಬೇಕು ಎಂದು ತಿಳಿಸಿದರು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಕವನ ಮಾತನಾಡಿ, ಸರ್ಕಾರದಿಂದ ಮೂಲ ಮೀನುಗಾರಿಕೆ ವೃತ್ತಿಯಲ್ಲಿರುವವರಿಗೆ ಅನೇಕ ಸವಲತ್ತುಗಳಿವೆ. ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ಯೋಜನೆಗಳ ಉಪಯೋಗ ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ರಾಧಾಮಣಿ, ನಿರ್ದೇಶಕರಾದ ಬಿ.ಎಂ.ಶಿವಣ್ಣ, ಎ.ಎಂ.ರಾಮೇಗೌಡ, ಬಿ.ಆರ್.ಕುಮಾರ್, ಎಚ್.ಎಸ್.ಜಗದೀಶ್, ಶಹನಾಜ್, ರಸೂಲ್, ಇಮ್ತಿಯಾಜ್, ಎಂ.ಪಿ.ಶೇಖರ್, ಮುರುಗೇಶ್ ಪೂಜಾರಿ, ಜೋಹರ್ ಅಂಜುA, ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎನ್.ಪುನೀತ್‌ರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net