3.20 ಲಕ್ಷ ರೂ. ಉಳಿತಾಯ ಬಜೆಟ್​

24blh1 tmc budget
Published on

ಬೈಲಹೊಂಗಲ: ಪಟ್ಟಣದ ಪುರಸಭೆಯಲ್ಲಿ ಸೋಮವಾರ ಅಧ್ಯ ವಿಜಯ ಬೋಳನ್ನವರ 2025&26ನೇ ಸಾಲಿನ ಪುರಸಭೆಯ 3,20,000 ರೂ.ಗಳ ಉಳಿತಾಯ ಆಯವ್ಯಯ ಮಂಡಿಸಿದರು.

ನಂತರ ಮಾತನಾಡಿ, ನತ್ಯಾಜ್ಯ ವಸ್ತು ನಿರ್ವಹಣೆ ಜಾಗದಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಹಸಿರು ಇಂಧನ ತಯಾರಿಸುವ ಯೋಜನೆ ಜಾರಿಗೊಳಿಸಲಾಗಿದೆ. ನತ್ಯಾಜ್ಯ ವೆಜ್ಞಾನಿಕವಾಗಿ ನಿರ್ವಹಣೆಯಾಗುವುದಲ್ಲದೆ, ತ್ಯಾಜ್ಯ ಸಂಸ್ಕರಣೆಗೆ ತಗಲುವ ವೆಚ್ಚವೂ ಉಳಿತಾಯವಾಗಲಿದೆ ಎಂದರು.

ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ, ಹಿಂದುಳಿದ ವರ್ಗದ ಜನರಿಗಾಗಿ ಮತ್ತು ಅಂಗವಿಕರ ಕಲ್ಯಾಣಕ್ಕಾಗಿ ಅಭಿವದ್ಧಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ಎಸ್​ಎ್​ಸಿ ಮತ್ತು ಸ್ಥಳಿಯ ನಿಧಿಯಡಿ ಶೇ.24.10ರಡಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) 18.32 ಲ ರೂ. ಕಾಯ್ದಿರಿಸಿದ್ದು, ಶೇ.7.25ರಡಿ (ಇತರ ಹಿಂದುಳಿದ ವರ್ಗಗಳ ಬಡತನ ನಿಮೂರ್ಲನೆ) ಕಾರ್ಯಕ್ರಮಕ್ಕಾಗಿ 2.20 ಲ ರೂ. ಹಾಗೂ ಶೇ.5ರಡಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕಾಗಿ 1.52 ಲ ರೂ. ಅನುದಾನ ಕಾಯ್ದಿರಿಸಿದೆ. ರಸ್ತೆ, ಚರಂಡಿಗೆ 111.55 ಲ ರೂ., ನೀರು ಸರಬರಾಜು ನಿರ್ವಹಣೆಗೆ 323 ಲ ರೂ., ಸಾರ್ವಜನಿಕ ಶೌಚಗೃಹ ನಿರ್ಮಾಣ ಹಾಗೂ ನಿರ್ವಹಣೆಗಾಗಿ 16.55 ಲ ರೂ., ನತ್ಯಾಜ್ಯ ವಸ್ತು ನಿರ್ವಹಣೆಗೆ 216 ಲ ರೂ., ಬೀದಿ ದೀಪದ ನಿರ್ವಹಣೆಗೆ 94.40 ಲ ರೂ. ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.

ಉಳಿತಾಯದ ಆಯವ್ಯಯವನ್ನು ಸದಸ್ಯ ಅರ್ಜುನ ಕಲಕುಟಕರ ವಿವರಿಸಿದರು. ಒಟ್ಟು ಆದಾಯ 32.18 ಕೋಟಿ ರೂ.ಗಳಲ್ಲಿ ಒಟ್ಟು 32.15 ಕೋಟಿ ರೂ. ರ್ಖಚಾಗಿ 3.20 ಲ ರೂ. ಉಳಿತಾಯದ ಅಂದಾಜು ಪತ್ರಿಕೆಯನ್ನು ತಯಾರಿಸಿ, ಸರ್ವಾನುಮತದಿಂದ ಮಂಜೂರಾತಿ ಪಡೆಯಲಾಯಿತು.

ಬೈಲಹೊಂಗಲಕ್ಕೆ ಶ್ರೀ 24/7 ನೀರು: ಬೈಲಹೊಂಗಲ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ 24/7 ಯೋಜನೆ ಕಾಮಗಾರಿ ಶೇ.95 ಪೂರ್ಣಗೊಂಡಿದ್ದು, 2 ತಿಂಗಳ ಒಳಗಾಗಿ ನೀರು ಪೂರೈಸಲಾಗುವುದು. ಅದರಂತೆ ಒಳಚರಂಡಿ ಯೋಜನೆಯೂ ಸಹ ಶೇ.95 ಪೂರ್ಣಗೊಂಡಿದ್ದು, ಪಟ್ಟಣ ಸಂಪೂರ್ಣ ಒಳಚರಂಡಿ ವ್ಯವಸ್ಥೆ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಪುರಸಭೆ ವ್ಯಾಪ್ತಿಯ ಅಂಬೇಡ್ಕರ್​ ನಗರ, ಇಂದಿರಾ ನಗರ ಹಾಗೂ ಇನ್ನಿತರ ಜಾಗಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಪುರಸಭೆಗೆ ಆದಾಯದ ಮೂಲ ಸಷ್ಟಿ ಜತೆಗೆ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ದೊಡ್ಡಕೆರೆಯನ್ನು ಪ್ರವಾಸ ಸ್ಥಾನವಾಗಿ ಅಭಿವದ್ಧಿಪಡಿಸಲಾಗಿದೆ. ಪುರಸಭೆ ಅಧೀನದಲ್ಲಿರುವ ಎಂಎಸ್​ಎಸ್​ಆರ್​ ಮತ್ತು ಎಂಕೆಸಿಆರ್​ ಪ್ರೌಢಶಾಲೆಗಳ ಹೊಸಕಟ್ಟಡ ನಿರ್ಮಾಣ, ದುರಸ್ತಿ ಕಾಮಗಾರಿ ನಡೆಸಿ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

ಉಪಾಧ್ಯ ಬುಡ್ಡೇಸಾಬ ಶಿರಸಂಗಿ, ಸ್ಥಾಯಿ ಸಮಿತಿ ಚೇರ್ಮನ್​ ಹೇಮಲತಾ ಹಿರೇಮಠ, ಸದಸ್ಯರಾದ ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮನ್ನವರ, ರಾಜಶೇಖರ ಮೂಗಿ, ಶಿವಬಸಪ್ಪ ಕುಡಸೋಮಣ್ಣವರ, ಅರ್ಜುನ ಕಲಕುಟಕರ, ಶಿವಾನಂದ ಕೋಲಕಾರ, ಸಾಗರ ಭಾವಿಮನಿ, ಸುಧೀರ ವಾಲಿ, ಸದರುದ್ದೀನ್​ ಅತ್ತಾರ, ಅಂಬಿಕಾ ಕೊಟಬಾಗಿ, ಶಶಿಕಲಾ ಹೊಸಮನಿ, ಅಮಿರಬಿ ಬಾಗವಾನ್​, ಪ್ರೇಮಾ ಇಂಚಲ, ಉಮಾ ಹೊಸೂರ, ದಿಲಶಾದ್​ ನದಾಫ್​, ವ್ಯವಸ್ಥಾಪಕ ಎಂ.ಐ.ಕುಟ್ರಿ, ಕಿರಿಯ ಅಭಿಯಂತರರಾದ ಜಿ. ಜಿ. ಮಹಾಳಂಕ, ಬಸನಗೌಡ ಪಾಟೀಲ, ಕಂದಾಯ ಅಧಿಕಾರಿ ಎಸ್​.ಎಸ್​.ಹಳ್ಳೂರ, ಸಿಬ್ಬಂದಿ ಐ. ಗುಡಿಮನಿ, ಅಕೌಂಟಂಟ್​ ಸೋನಾಲಿ ಬುಬನಾಳೆ, ಕಿರಿಯ ಆರೋಗ್ಯ ನಿರೀಕ ಎಸ್​.ಎನ್​. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net