ಬೈಲಕುಪ್ಪೆ ಡೇರಿಗೆ 3.2 ಲಕ್ಷ ರೂ.ಲಾಭ

oppo_0
oppo_0
Published on

ಬೈಲಕುಪ್ಪೆ: ಬೈಲಕುಪ್ಪೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 90 ಲಕ್ಷ ರೂ.ವಹಿವಾಟು ನಡೆಸಿದ್ದು ಸಂಘಕ್ಕೆ 3.21 ಲಕ್ಷ ರೂ.ಲಾಭ ಸಿಕ್ಕಿದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಅವಿನಾಶ್ ತಿಳಿಸಿದರು.


ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘದಲ್ಲಿ 150 ಷೇರುದಾರರಿದ್ದು, 80 ಜನ ಮಾತ್ರ ಹಾಲು ಹಾಕುತ್ತಿದ್ದಾರೆ. ಇನ್ನುಳಿದ ಸದಸ್ಯರು ಹಾಲು ಹಾಕುತ್ತಿಲ್ಲ. ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಉಳಿದವರನ್ನು ಹಾಲು ಹಾಕುವಂತೆ ಮನವೊಲಿಸಲಾಗುವುದು ಎಂದು ಹೇಳಿದರು.


ಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಸುಬ್ರಹ್ಮಣ್ಯ ಮಾತನಾಡಿ, ಸಂಘಕ್ಕೆ ಸ್ವಂತ ಕಟ್ಟಡವಿಲ್ಲ. ಆಡಳಿತ ಮಂಡಳಿಯವರು ಪಿಡಿಒ ಅವರನ್ನು ಸಂಪರ್ಕಿಸಿ ಜಾಗದ ವ್ಯವಸ್ಥೆ ಮಾಡಿಕೊಂಡರೆ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವೆ ಎಂದು ಹೇಳಿದರು.


ಸಂಘದ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಲೀಲಾ, ವಿಸ್ತರಣಾಧಿಕಾರಿ ಸತೀಶ್, ಬೈಲಕುಪ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಸುಬ್ರಹ್ಮಣ್ಯ, ನಿರ್ದೇಶಕರಾದ ವಸಂತಾ, ಶಾಂತಮ್ಮ, ಲಲಿತಾ, ಶೋಭಾ, ಜವರಮ್ಮ, ಮಣಿ, ಷಡಕ್ಷರಿ, ಕಾರ್ಯನಿರ್ವಣಾಧಿಕಾರಿ ಆಶಾ, ಸಿಬ್ಬಂದಿ ಸವಿತಾ, ಮುಖಂಡರಾದ ರಾಮಣ್ಣ ಶೆಟ್ಟಿ, ರಾಮೇಗೌಡ, ಬಿ.ಟಿ.ರಾಮಣ್ಣ, ಆನಂದ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net