3.13 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cyber crime
Published on

ಹುಬ್ಬಳ್ಳಿ: ಕಸ್ಟಮರ್ ಕೇರ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತನೊಬ್ಬ, ಮುಂಬೈ ಮೂಲದ ಇಲ್ಲಿನ ಅಮರಗೋಳದ ವೆಂಕಟೇಶ ಎಸ್. ಎಂಬಾತನ ಬ್ಯಾಂಕ್ ಖಾತೆಯಿಂದ ಆನ್​ಲೈನ್ ಮೂಲಕ 3.13 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ವೆಂಕಟೇಶ ಅವರ ಮೊಬೈಲ್ ಫೋನ್​ನಿಂದ ಎನಿಡೆಸ್ಕ್ ಆಪ್ ಡೌನ್​ಲೋಡ್ ಮಾಡಿಸಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net